ಏಡ್ಸ್​ ತಡೆಗೆ ಜಾಗೃತಿ ಅಣಿಯಾನ

Awareness drive to prevent AIDS
ವಿಜಯಪುರದಲ್ಲಿ ವಿಶ್ವ ಏಡ್ಸ್​ ದಿನಾಚಾರಣೆ ಹಿನ್ನೆಲೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಡಾ. ಎಂ.ಬಿ. ಬಿರಾದಾರ, ಎಸ್​.ಜಿ. ರೋಡಗಿ, ಎಸ್​.ಜಿ. ಮುರನಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಜನತೆ ಸಂಕಲ್ಪ ಮಾಡಿದರೆ ಏಡ್ಸ್​ ನಿವಾರಣೆ ಸಾಧ್ಯ ಎಂದು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾ ಟಕದ ಅಧ್ಯಕ್ಷ ಎಸ್​.ಜಿ. ರೋಡಗಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಶ್ರೀಮತಿ ಬಂಗಾರೆಮ್ಮ ಸಜ್ಜನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಮತ್ತು ಜಿಲ್ಲಾ ಯ ಮತ್ತು ಏಡ್ಸ್​ ನಿವಾರಣಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಯ ಮತ್ತು ಏಡ್ಸ್​ ನಿವಾರಣಾ ಇಲಾಖೆಯ ಡಾ.ಎಂ.ಬಿ. ಬಿರಾದಾರ ಅವರು, ಏಡ್ಸ್​ ರೋಗದ ಗುಣಲಕ್ಷಣಗಳು, ತಡೆಗಟ್ಟುವ ವಿಧಾನ ಹಾಗೂ ಮುಂದುವರೆದ ಔಷಧ ಪದ್ದತಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಹಾವಿದ್ಯಾಲಯದ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರಕ್ತದಾನ ಶಿಬಿರ ನಡೆಯಿತು.

ರೆಡ್​ ಕ್ರಾಸ್​ ಜಿಲ್ಲಾ ಶಾಖೆಯ ಕಾರ್ಯದರ್ಶಿ ಎಸ್​.ಜಿ. ಮುರನಾಳ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ, ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹಿಂದ್ರಕರ, ಮಲ್ಲಿಕಾರ್ಜುನ ಕೆಂಗನಾಳ, ಡಾ. ಕೆ.ಎ. ಪಾಟೀಲ, ಪ್ರಾಧ್ಯಾಪಕ ಡಾ. ಎ.ಟಿ. ಶ್ರೀನಿವಾಸ, ವಿ.ಎಸ್​. ನಂದೇಶ , ಡಾ. ಬಿ.ವಿ. ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net