ಜಾಗೃತಿ ಮೂಲಕ ಮಲೇರಿಯ ನಿಯಂತ್ರಣ ಸಾಧ್ಯ

nrp 2 A
Published on

ಎನ್.ಆರ್.ಪುರ: ಮನೆ ಮನೆಗೆ ಭೇಟಿ ಜ್ವರ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಮಲೇರಿಯ ವಿರೋಧಿ ಮಾಸಾಚರಣೆ ಉದ್ದೇಶ ಎಂದು ಡಾ.ಕೆ.ಒ.ನರಸಿಂಹಮೂರ್ತಿ ಹೇಳಿದರು.

ಸರ್ಕಾರಿ ಆಸ್ಪತ್ರೆ ಸಭಾಗಂಣದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಖಾಸಗಿ ವೈದ್ಯರು, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಭಾರತೀಯ ವೈದ್ಯಕೀಯ ಪದ್ಧತಿ ಅನುಸರಿಸುವಂತಹ ವೈದ್ಯರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕರಪತ್ರ ವಿತರಣೆ, ಜನಜಾಗೃತಿ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಮಾತ್ರ ಮಲೇರಿಯ ನಿರ್ಮೂಲನೆ ಸಾಧ್ಯ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ವಿಪರೀತ ಚಳಿಜ್ವರ, ಮೈಕೈ ನೋವು, ವಾಂತಿ, ಕಣ್ಣು ಕೆಂಪಾಗುವುದು ಹಸಿವಾಗದಿರುವುದು. ಈ ಕಾಯಿಲೆಯ ಪ್ರಮುಖ ಲಕ್ಷಣ.ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ರಕ್ತ ಮಾದರಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು. ನೋಡಲ್ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಹೇಮಲತಾ ಮಲೇರಿಯಾ ಕಾಯಿಲೆ ಪತ್ತೆ ಹಚ್ಚಲು ಯಾವ ರೀತಿ ಕಾರ್ಯ ಪ್ರವೃತ್ತಿ ನಡೆಸಬೇಕು ಎಂಬುದರ ಕುರಿತು ಪ್ರತ್ಯಕ್ಷತೆ ನೀಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕಿ ಲಲಿತಾ, ಡಾ.ಪ್ರಸನ್ನಕುಮಾರ್, ಡಾ.ಸುರೇಶ್, ಡಾ.ಶಿವಕುಮಾರ್, ಡಾ.ಸಾತ್ವಿಕ್ ಸುರೇಶ್, ಡಾ,ನಾಗೇಶ್, ಡಾ.ರಮೇಶ್, ಪಿ.ಪಿ.ಬೇಬಿ, ದರ್ಶನ್, ಪಿ.ಕೆ.ಭಗವಾನ್, ಸಂತೋಷ, ಆರ್.ಕೇಶವಮೂರ್ತಿ, ವೆಂಕಟೇಶ್, ಸುಜಾತಾ, ಅಜಯ್, ಕಿರಣ್, ಪವನ್‌ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net