

ಕಾಸರಗೋಡು: ಕೇಂದ್ರ ಸರ್ಕಾರದ ‘ನಶೆ ಮುಕ್ತ ಭಾರತ’ ಅಭಿಯಾನ ಅಂಗವಾಗಿ ತಂಬಾಕು- ಮಾದಕದ್ರವ್ಯಗಳಿಂದ ಉಂಟಾಗುವ ದುಷ್ಪರಿಣಾಮಗಳ ವಿರುದ್ಧ ಜಾಗೃತಿ ಅಭಿಯಾನ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರುಗಿತು.
ಶಾಲಾ ವಿದ್ಯಾರ್ಥಿಗಳು ತಂಬಾಕು, ಮಾದಕವಸ್ತುಗಳ ಬಳಕೆಯಿಂದ ಮಾನವನ ದೇಹದಲ್ಲಿ ಉಂಟಾಗುವ ಅನಾರೋಗ್ಯ ಸಮಸ್ಯೆ, ಸಮಾಜದಲ್ಲಿ ಬೀರುವ ದುಷ್ಪರಿಣಾಮಗಳ ಬಗ್ಗೆ ಸ್ವತಃ ಭಿತ್ತಿ ಚಿತ್ರ ರಚಿಸಿ ಪ್ರದರ್ಶಿಸುವ ಮೂಲಕ ಜಾಗೃತಿ ಅಭಿಯಾನ ನಡೆಸಿಕೊಟ್ಟರು.
ಶಾಲಾ ಮುಖ್ಯಶಿಕ್ಷಕ ಎನ್.ಕೇಶವ ಪ್ರಕಾಶ್, ಹಿರಿಯ ಶಿಕ್ಷಕರಾದ ವೇಣುಗೋಪಾಲ್, ಉದಯಶಂಕರ್, ವಿದ್ಯಾರತ್ನ, ಸುಗುಣಾ, ಅಭಿಲಾಷಾ, ವಿಜಯ, ದೈಹಿಕ ಶಿಕ್ಷಣ ಶಿಕ್ಷಕ ಮಿದುನ್, ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಪುರುಷೋತ್ತಮ ಬಿ.ಎಂ. ಉಪಸ್ಥಿತರಿದ್ದರು.