ಹಬ್ಬನಘಟ್ಟ ಗ್ರಾಮದಲ್ಲಿ ಜಾಗೃತಿ ಅಭಿಯಾನ

IMG-20250510-WA0098
ಪರಿಶಿಷ್ಟ ಜಾತಿ ಜನಗಣತಿ ದತ್ತಾಂಶ ಸಂಗ್ರಹ ಕುರಿತು ಮಾದಿಗ ಸಮುದಾಯದ ಮುಖಂಡರು ಹಬ್ಬನಘಟ್ಟ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಚಂದ್ರಯ್ಯ, ಜಯಕುಮಾರ್, ರುದ್ರಮುನಿ, ವಸಂತಕುಮಾರಿ ಇತರರಿದ್ದಾರೆ.
Published on

ಅರಸೀಕೆರೆ: ಸರ್ಕಾರ ಪರಿಶಿಷ್ಟ ಜಾತಿ ಜನಗಣತಿ ದತ್ತಾಂಶ ಸಂಗ್ರಹ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ.ಚಂದ್ರಯ್ಯ ನೇತೃತ್ವದ ತಂಡದಿಂದ ತಾಲೂಕಿನ ಹಬ್ಬನಘಟ್ಟ ಗ್ರಾಮದಲ್ಲಿ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು.

ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಜನಗಣತಿ ಕಾಲಂ 61 ರಲ್ಲಿ ಮಾದಿಗ ಎಂದೇ ನಮೂದಿಸುವಂತೆ ಅರಿವು ಮೂಡಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಜಾತಿ ಜನಗಣತಿ ಕಾರ್ಯವು ಪರಿಶಿಷ್ಟ ಜಾತಿ ಸಮುದಾಯಗಳ ಪಾಲಿಗೆ ಮಹತ್ವದ್ದಾಗಿದೆ. ಶೋಷಿತರ ಪಾಲಿಗೆ ಒದಗಿರುವ ಸುವರ್ಣಾವಕಾಶವಾಗಿದೆ. ಮಾದಿಗರು ತಮ್ಮ ಜಾತಿಯನ್ನು ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಅನುಕೂಲ ಆಗಲಿದೆ. ಇದನ್ನು ಅರಿತುಕೊಂಡು ಯಾವುದೇ ಅಂಜಿಕೆ ಇಲ್ಲದೆ ಮಾದಿಗ ಎಂದು ಬರೆಸಿ ಎಂದು ಸಮುದಾಯದ ಬಾಂಧವರಲ್ಲಿ ಮನವಿ ಮಾಡಲಾಗುತ್ತಿದೆ, ಈ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆ ಕಾರ್ಯ ಮುಗಿಯುವವರೆಗೂ ಅರಿವು ಮೂಡಿಸುವ ಕಾರ್ಯ ಮುಂದುವರಿಯಲಿದೆ ಎಂದರು.

ಸಮಿತಿಯ ನಗರ ಘಟಕದ ಅಧ್ಯಕ್ಷ ಎನ್ ಜಯಕುಮಾರ್, ಉಪಾಧ್ಯಕ್ಷ ರುದ್ರಮುನಿ , ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕರಿಯಪ್ಪ ಹಬ್ಬನ ಘಟ್ಟ ಗ್ರಾಪಂ ಅಧ್ಯಕ್ಷೆ ವಸಂತ ಕುಮಾರಿ, ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net