

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಹೆಸರೂರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಶಿಬಿರದಲ್ಲಿ ಶ್ರಮದಾನ ಕಾರ್ಯಕ್ರಮ ಪ್ರಯುಕ್ತ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಮಾದಕ ವಸ್ತುಗಳ ಅಪರಾಧ ತಡೆ ಜಾಗೃತಿ ಜಾಥಾ ಜರುಗಿತು. ಶ್ರೀ ರೇಣುಕಾಚಾರ್ಯ ಮಠದಲ್ಲಿ, ಶಾಲಾ ಆವರಣ, ಆಂಜನೇಯ ದೇವಸ್ಥಾನ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ನಂತರ ಜಾಥಾ ಮಾಡಲಾಯಿತು. ಕಾಲೇಜ್ ಪ್ರಾಚಾರ್ಯ ಪಿ.ಎಂ. ಕಲ್ಲನಗೌಡರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಸವರಾಜ ಜೋಗಿನ, ವೀರೇಶ ಶಾಸ್ತ್ರಿಮಠ, ನಾಗರಾಜ ಸೋಳಂಕಿ, ವೀರಪ್ಪ ಗುತ್ತಲ, ಗರುಡಪ್ಪ ಜಂತ್ಲಿ, ವೀರಣ್ಣ ಕವಲೂರ, ಮಲ್ಲಯ್ಯ ಹಿರೇಮಠ, ಎಸ್.ಎಸ್. ಮುಂಡರಗಿ, ಕೆ. ಬೇಲೇರಿ, ಎಸ್.ಎಚ್. ನದಾಫ್, ಶಿಬಿರಾರ್ಥಿಗಳು ಇದ್ದರು.