ನಾಮಫಲಕ ಅಳವಡಿಸಿ ಕಸ ಸುರಿಯದಂತೆ ಜಾಗೃತಿ

Oplus_16908288
ವಿರಾಜಪೇಟೆಯ ಟೆಂಡರ್ ಚಿಕ್ಕನ್ ಮುಂಭಾಗ ಸ್ಥಳದಲ್ಲಿ ಹೂ ಗಿಡ ನೆಡುವ ಮೂಲಕ ಕಸ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ದೇಚಮ್ಮ, ರೀತು ಸಿಂಗ್, ಕೋಮಲಾ, ಮತೀನ್ ಇದ್ದರು.
Published on

ವಿರಾಜಪೇಟೆ: ಇಲ್ಲಿನ ಟೆಂಡರ್ ಚಿಕನ್ ಮಳಿಗೆ ಮುಂಭಾಗ ಹಾಗೂ ಆಟೋ ನಿಲ್ದಾಣ ಬಳಿ ಸಾರ್ವಜನಿಕರು ಪದೇ ಪದೆ ಕಸ ಹಾಕುವ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪುರಸಭೆ ಅಧಕ್ಷೆ ದೇಚಮ್ಮ ಕಾಳಪ್ಪ ಅವರ ನೇತೃತ್ವದಲ್ಲಿ ನಾಮಫಲಕ ಅಳವಡಿಸಿ ಜಾಗೃತಿ ಮೂಡಿಸಲಾಯಿತು.

ಕಸದಿಂದಾಗಿ ಸುತ್ತಮುತ್ತಲಿನ ಪ್ರದೇಶ ದುರ್ನಾತ ಬೀರುತ್ತಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಸ್ವಚ್ಛ ನಗರ-ಸುಂದರ ನಗರ ಎಂಬ ಧ್ಯೇಯ ವಾಕ್ಯದೊಂದಿಗೆ ಹೂ ಗಿಡ ಇಟ್ಟು (ಇಲ್ಲಿ ಯಾರೂ ಕಸ ಹಾಕಬಾರದು) ಎಂಬ ನಾಮಫಲಕ ಅಳವಡಿಸಿ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದರು.

ಪುರಸಭೆ ಹಿರಿಯ ಸದಸ್ಯರಾದ ಎಸ್.ಎಚ್.ಮತೀನ್, ಪರಿಸರ ಇಂಜಿನಿಯರ್ ರೀತುಸಿಂಗ್, ಆರೋಗ್ಯಾಧಿಕಾರಿ ಕೋಮಲಾ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net