ಮತದಾನಕ್ಕಿದೆ ಸಮಾಜ ಬದಲಿಸುವ ಶಕ್ತಿ

Sarjapura News And Photos 01
ಮತದಾನದ ಬಗ್ಗೆ ಅರಿವು
Published on

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಏ.26ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಜನತೆ ಸೇರಿ ಎಲ್ಲ ಮತದಾರರು ಕಡ್ಡಾಯವಾಗಿ ಸ್ವಯಂ ಪ್ರೇರಿತವಾಗಿ ಮತದಾನ ಮಾಡುವ ಮೂಲಕ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ತಾಪಂ ಇಒ ಸಿ.ಎಸ್.ಶ್ರೀನಾಥ್ ಗೌಡ ಮನವಿ ಮಾಡಿದರು.
ಸರ್ಜಾಪುರ ಸಮೀಪದ ತಿಗಳ ಚೌಡದೇನಹಳ್ಳಿಯಲ್ಲಿ ಆನೇಕಲ್ ತಾಲೂಕು ಸ್ವೀಪ್ ಸಮಿತಿ ಹಾಗೂ ಯಮರೆ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಹಾಗೂ ಯುವ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದ್ದು, ಎಲ್ಲರೂ ಮತದಾನದ ಮಹತ್ವವನ್ನು ಅರಿತು, ಸ್ವಯಂ ಪ್ರೇರಿತವಾಗಿ ಮತದಾನ ಮಾಡಬೇಕು ಎಂದರು.
ವಿಶೇಷವಾಗಿ ಮನೆಗೆ ಮನೆಗೆ ಮತದಾನದ ಮಮತೆಯ ಕರೆಯೋಲೆ ನೀಡಲಾಯಿತು. ದ್ವಿಚಕ್ರ ಹಾಗೂ ಕಾರುಗಳು ಮತ್ತು ಮನೆಗಳ ಗೋಡೆಗಳ ಮೇಲೆ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಸ್ಟಿಕ್ಟರ್‌ಗಳನ್ನು ಅಂಟಿಸಿ, ಜಾಗೃತಿ ಮೂಡಿಸಲಾಯಿತು. 19 ಸಾವಿರ ರೈತರ ಜತೆಗೆ ಆಡಿಯೋ ಕಾನ್ಫರೆನ್ಸ್ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net