

ಬೆಟ್ಟದಪುರ: ಸಮೀಪದ ಕೊಣಸೂರು ಗ್ರಾಮದಲ್ಲಿ ಭುವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ಕುಷ್ಠ ಹಾಗೂ ಕ್ಷಯ ರೋಗ ಸಮೀಕ್ಷೆ ನಡೆಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ಆರ್.ಶಶಿ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ, ತೂಕ ಕಡಿಮೆಯಾಗುವಂತಹ ಲಕ್ಷಣಗಳು ಕಂಡುಬಂದರೆ ಮತ್ತು ಮೈಯಲ್ಲಿ ತಿಳಿ ತಾಮ್ರದ ಮಚ್ಚೆ, ಒಂದು ದೊಡ್ಡ ಮಚ್ಚೆ ಅಥವಾ ಹತ್ತಕ್ಕಿಂತ ಜಾಸ್ತಿ ಮಚ್ಚೆಗಳು ಕಂಡು ಬಂದರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಬೇಕು ಎಂದರು.
ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಂಜು, ಆಶಾ ಸುಗಮಕಾರ ನಾಗಮಣಿ, ಆಶಾ ಕಾರ್ಯಕರ್ತೆರಾದ ರುಕ್ಮಿಣಿ, ಸಾವಿತ್ರಿ, ಶೋಭ, ಯಶೋದಾ ಇದ್ದರು.