ಎದೆ ಹಾಲಿನ ಮಹತ್ವ ಕುರಿತು ಅರಿವು

jana suraksha
Published on

ಮಡಿಕೇರಿ: ಮಕ್ಕಂದೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಎದೆ ಹಾಲಿನ ಮಹತ್ವ ಮತ್ತು ಇಲಾಖೆಗಳ ಅರಿವು ಕಾರ್ಯಕ್ರಮ ಬುಧವಾರ ನಡೆಯಿತು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಎದೆ ಹಾಲಿನ ಮಹತ್ವದ ಬಗ್ಗೆ ಮತ್ತು ತೂಕದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ ಪೌಷ್ಟಿಕ ಆಹಾರ ಸೇವನೆ, ವಾಯುವಿಹಾರ, ಹೆಚ್ಚು ನೀರು ಸೇವನೆ, ಸ್ಥಳೀಯವಾಗಿ ಸಿಗುವ ಹಣ್ಣುಗಳು ಮತ್ತು ಸೊಪ್ಪುಗಳನ್ನು ಪ್ರತಿನಿತ್ಯ ಬಳಸಲು ಪ್ರೋತ್ಸಾಹಿಸಿದರು. ಭಾಗ್ಯಲಕ್ಷ್ಮಿ, ಮಾತ್ರ ವಂದನ, ಎಫ್‌ಆರ್‌ಎಸ್, ಪೋರ್ಶನ್ ಟ್ರ್ಯಾಕರ್, ಅಂಗನವಾಡಿಯಲ್ಲಿ ಸಿಗುವಂತ ಆಹಾರಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ದೇವಕಿ ಅವರು ಪ್ರಾತ್ಯಕ್ಷತೆ ಮೂಲಕ ಎದೆ ಹಾಲು ನೀಡುವ ಬಗ್ಗೆ ಮಾಹಿತಿ ನೀಡಿದರು. ಚುಚ್ಚುಮದ್ದು ಕಾರ್ಯಕ್ರಮಗಳ ಬಗ್ಗೆ ಮತ್ತು ಇಲಾಖೆಯ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಡಿ.ಎಸ್.ಸರೋಜಾ, ಅಂಗನವಾಡಿ ಸಹಾಯಕಿ ಚಂದ್ರವತಿ, ಆಶಾ ಕಾರ್ಯಕರ್ತೆ ದಿವ್ಯ ಶಶಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net