

ಬೆಳಗಾವಿ: ಕೆಎಲ್ಇ ವೇಣುಧ್ವನಿ 90.4 ಎಫ್.ಎಂ., ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್ಇ ಜವಾಹರಲಾಲ್ ನೆಹರು ವೈದ್ಯಕಿಯ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಮಳೆಗಾಲದಲ್ಲಿ ಚರ್ಮದ ಆರೈಕೆ ಕುರಿತು ನೇರ ಫೋನ್&ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ವಿಭಾಗದ ತ ವೈದ್ಯ ಡಾ. ಭಾವನಾ ದೋಶಿ ಮತ್ತು ಡಾ. ವಿಜಯಾ ಸಜ್ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಚರ್ಮದ ಆರೈಕೆಗೆ ಸಂಬಂಧಿಸಿದ ಸಲಹೆ ನೀಡಿದರು. ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ನಿರ್ವಾಹಕಿ ಮನಿಷಾ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.