ಅಂಗಾಂಗ ದಾನದ ಬಗ್ಗೆ ಜಾಗೃತಿ

h20-giants
Published on

ಹುಬ್ಬಳ್ಳಿ: ಜೈಂಟ್ಸ್ ಸಪ್ತಾಹ ನಿಮಿತ್ತ ಜೈಂಟ್ಸ್ ಗ್ರುಪ್ ಆಫ್ ರಾಜಧಾನಿ ಕಾಲನಿ ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ನೆಹರು ನಗರದ ನೀರಿನ ಟ್ಯಾಂಕ್ ಹತ್ತಿರ ಗುರುವಾರ ಅಂಗಾಂಗ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾರ್ವಜನಿಕರಿಗೆ ಅಂಗಾಂಗ ದಾನದ ಬಗ್ಗೆ ವಿವರಗಳಿರುವ ಕರಪತ್ರ ಹಂಚಲಾಯಿತು. ಒಬ್ಬ ವ್ಯಕ್ತಿ ಅಂಗಾಂಗ ದಾನ ಮಾಡುವುದರಿಂದ 8 ಜನರ ಜೀವ ಉಳಿಸಬಹುದೆಂದು ಸಾರ್ವಜನಿಕರಿಗೆ ತಿಳಿ ಹೇಳಲಾಯಿತು. ದಾನ ಯಾರು ಮಾಡಬಹುದು?, ಯಾವಾಗ ಮಾಡಬಹುದೆಂದು? ತಿಳಿವಳಿಕೆ ನೀಡಲಾಯಿತು.

ಫೆಡರೇಷನ್ 6, ಯುನಿಟ್ 4ರ ನಿರ್ದೇಶಕ ಎನ್.ಬಿ. ಹೊಸೂರ, ಚನ್ನಬಸಪ್ಪ ಧಾರವಾಡಶೆಟ್ಟರ, ಗ್ರುಪಿನ್ ಅಧ್ಯಕ್ಷ ಹಬೀಬ, ಕಾರ್ಯದರ್ಶಿ ಗಣಪತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net