ಸ್ವಚ್ಚತೆ ಹಾಗೂ ನೈರ್ಮಲ್ಯ ಕುರಿತು ಜಾಗೃತಿ

RAICHUR
RAICHUR
Published on

ರಾಯಚೂರು ನಗರದಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯ ಕುರಿತು ಅರಿವು ಮೂಡಿಸಲು ಸೋಮವಾರ ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಆಯೋಜನೆ ಮೂಲಕ ಮೂರು ತಂಡಗಳಿAದ ಮ್ಯಾರಾಥಾನ್ ಓಟದ ಜತೆಗೆ ಜಾಗೃತಿ ಮೂಡಿಸಲಾಯಿತು.

ಜಾಥವನ್ನು ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗೌರಿ ಯಳವತ್ತಿಮಠ ಅವರು ಚಾಲನೆ ನೀಡಿ ಮಾತನಾಡಿ, ರಾಯಚೂರು ನಗರದ ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಚಚ್ಛತೆ ಹಾಗೂ ನೈರ್ಮಲ್ಯದ ಕುರಿತು ಸ್ವಚ್ಛತಾ ಮ್ಯಾರಾಥಾನ್ ಆಯೋಜಿಸಲಾಗಿದ್ದು, ನಗರದ ಸ್ವಚ್ಛತೆ ಕಾಪಾಡುವುದು ಕೇವಲ ಸರ್ಕಾರದ ಕೆಲಸವಲ್ಲ. ಸಾರ್ವಜನಿಕರ ಕೆಲಸವು ಅಗತದ್ಯವಾಗಿದೆ ಎಂದರು.

ನAತರ ಜಾಥವು ನಗರದ ಸಾರ್ವಜನಿಕ ಉದ್ಯಾನವನ,ಸರ್ಕಾರಿ ಪದವಿ ಕಾಲೇಜು ಹಾಗೂ ಮಹಾತ್ಮ ಗಾಂಽ ಕ್ರೀಡಾಂಗಣದಲ್ಲಿ ಹಸಿರು, ನೀಲಿ ,ಬಿಳಿ ಸೇರಿ ಒಟ್ಟು ಮೂರು ತಂಡಗಳಾಗಿ ಸ್ಚಚ್ಛತೆ ಹಾಗೂ ನೈರ್ಮಲ್ಯದ ಕುರಿತು ಅರಿವು ಮೂಡಿಸಲು ಜÁಗೃತಿ ಹಾಡು ಹಾಗೂ ಘೋಷಣೆಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಾ ಜÁಥಾ, ಮ್ಯಾರಾಥಾನ್ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾವೇರಿ, ವೈಜುನಾಥ,ಜಮುನ,ಶೈಲಜ,ಈರಮ್ಮ, ರಾಧ,ರಮೇಶ, ನಾಗರಾಜ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net