ವಂಚಕರ ಬಗ್ಗೆ ಗ್ರಾಹಕರು ಜಾಗೃತರಾಗಿರಲಿ

Oplus_16908288
Oplus_16908288
Published on

ಸಿದ್ದಾಪುರ : ಮೋಸಗಾರರ ಬಗ್ಗೆ ಗ್ರಾಹಕರು ಸದಾ ಜಾಗೃತರಾಗಿರಬೇಕು ಎಂದು ಬ್ಯಾಂಕ್ ಆಫ್ ಬರೋಡಾ ಶಾಖೆ ವ್ಯವಸ್ಥಾಪಕ ಮೋಹನ್ ಹೇಳಿದರು.

ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬ್ಯಾಂಕ್ ಶಾಖೆಯಲ್ಲಿ ಸೈಬರ್ ಕ್ರೈಂ ಬಗ್ಗೆ ಗ್ರಾಹಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಫೋನ್ ಕರೆ ಮಾಡುವ ಮೋಸಗಾರರು ಹೆಚ್ಚಾಗಿದ್ದಾರೆ. ಹಾಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಮಾಹಿತಿ ಮತ್ತು ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅಪರಿಚಿತ ಲಿಂಕ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಕ್ಲಿಕ್ ಮಾಡಬಾರದು ಎಂದರು. ಅಧಿಕೃತ ಮತ್ತು ಸುರಕ್ಷಿತ ನೆಟ್‌ವರ್ಕ್‌ಗಳನ್ನು ಮಾತ್ರ ಬಳಸುವಂತೆ ಅವರು ಸಲಹೆ ನೀಡಿದರು.

ಒಂದು ವೇಳೆ ಸೈಬರ್ ವಂಚನೆ ನಡೆದರೆ ತಕ್ಷಣವೇ 1930ಗೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ಅರಿವು ಮೂಡಿಸುವ ಭಿತ್ತಿಪತ್ರವನ್ನು ಹಂಚಲಾಯಿತು. ಗ್ರಾಹಕರದ ಲೋಕೇಶ್, ಮೋಹನ್, ಅಂತೋಣಿ, ಸವಿತಾ, ಶಾಖೆಯ ಸಿಬ್ಬಂದಿ ಸುರೇಶ್, ಅಭಿಮನ್ಯು, ಅಪರ್ಣಾ, ವಿನೋದ್, ಗಂಗಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net