

ಹಗರಿಬೊಮ್ಮನಹಳ್ಳಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ‘ಜನನಿ ರತ್ನ’ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಸಾಧನೆಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದಂತಾಗಲಿದೆ ಎಂದು ಹಂಪಿ ಕನ್ನಡ ವಿವಿ ಸಹಾಯಕ ಕುಲ ಸಚಿವ ಎಂ.ಎಂ.ಶಿವಪ್ರಕಾಶ್ ಹೇಳಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಜನನಿ ಸೇವಾ ಟ್ರಸ್ಟ್ ನಿಂದ ಏರ್ಪಡಿಸಿದ್ದ ೨೦೨೩ ನೇ ಸಾಲಿನ ಜನನಿ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಂಪಾಪಟ್ಟಣ ಗ್ರಾಮದಲ್ಲಿ ಜನನಿ ಟ್ರಸ್ಟ್ ಮೂಲಕ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಲೆಮರೆ ಕಾಯಿಯಂತಿರುವರನ್ನು ಶೋಧಿಸಿ ರಾಜ್ಯ ಪ್ರಶಸ್ತಿ ವಿತರಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಪ್ರಶಸ್ತಿ ನೀಡುವ ಮೂಲಕ ಗಣ್ಯರನ್ನು ಕರೆಯಿಸಿ ಗ್ರಾಮಸ್ಥರಿಗೆ ಪರಿಚಯಿಸಿ ಯುವಕರಿಗೆ ಸ್ಪೂರ್ತಿ ತುಂಬುವ ಕೆಲಸವಾಗಿದೆ. ಜನಪದ ಕಲೆ ಗೊಂದಲಿಗರ ಆಟಕ್ಕೆ ರಾಜ್ಯದಲ್ಲಿ ಪ್ರಾತಿನಿಧ್ಯವನ್ನು ಹಂಪಾಪಟ್ಟಣ ಹೊಂದಿದೆ.
೧೯೯೩ ರಲ್ಲಿ ಮೊಟ್ಟಮೊದಲ ಬಾರಿಗೆ ಹಂಪಿ ವಿಶ್ವವಿದ್ಯಾಲಯ ಗೊಂದಲಿಗರ ದೇವೆಂದ್ರಪ್ಪನವರ ಐದು ನಾಟಕಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದೆ ಇದೀಗ ಮರುಮುದ್ರಣ ಪಡೆದಿರುವುದು ಹೆಮ್ಮೆ ಮೂಡಿಸಿದೆ. ಅವರ ಕುಟುಂಬದವರು ಗೊಂದಲಿಗರ ಆಟವನ್ನು ಜೀವಂತಿಕೆಯಿAದ ಪೋಷಿಸಿದ್ದಾರೆ. ಖ್ಯಾತನಟ ಶಂಕರ್‌ನಾಗ್ ಗೊಂದಲಿಗರ ದೇವೆಂದ್ರಪ್ಪನವರ ಭೇಟಿಯಾಗಲು ಹಂಪಾಪಟ್ಟಣಕ್ಕೆ ಆಗಮಿಸಿದ್ದರು. ಬಳಿಕ ಇವರ ಜೋಕುಮಾರಸ್ವಾಮಿ ನಾಟಕವನ್ನು ರೆಕಾರ್ಡಿಂಗ್ ಮಾಡಿಕೊಂಡು ಹೋಗಿದ್ದರೆಂದು ಸ್ಮರಿಸಿದರು.
ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಜನನಿ ಕಲಾ, ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಆರ್.ಖಾಜಾಹುಸೇನ್‌ಸಾಬ್, ಕರ್ನಾಟಕ ರಾಜ್ಯ ಬೀಜ ನಿಗಮ ನಿರ್ದೇಶಕ ಎಸ್.ರಾಜೇಂದ್ರ ಪ್ರಸಾದ್, ಪತ್ರಕರ್ತ ಬುಡ್ಡಿ ಬಸವರಾಜ ಮಾತನಾಡಿದರು.
ಈ ವೇಳೆ ಎಚ್.ಡಿ.ಕೋಟೆಯ ಎಂ.ಚAದ್ರಿಕಾ ದೊರೆಸ್ವಾಮಿ (ಅನಾಥ ರಕ್ಷಕ ರತ್ನ), ಧಾರವಾಡದ ಎ.ದರ್ಗಾ (ಸಾಹಿತ್ಯ ರತ್ನ), ಬೆಂಗಳೂರಿನ ಉಲ್ಲಾಸ (ಪಶುಪಾಲಕ ರತ್ನ), ಹೊಸಪೇಟೆಯ ಡಾ.ಚಂದ್ರಶೇಖರ್ ಕಮತ (ವೈದ್ಯ ರತ್ನ), ಮರಿಯಮ್ಮನಹಳ್ಳಿಯ ಗೋವಿಂದ ಪರಶುರಾಮ (ಸಮಾಜಸೇವಾ ರತ್ನ), ಹ.ಬೊ.ಹಳ್ಳಿಯ ಸುರೇಶನಾಯ್ಕ್ (ಅರಕ್ಷಕ ರತ್ನ), ದಾವಣಗೆರೆಯ ಕೆ.ರಾಘವೇಂದ್ರ ನಾಯರಿ(ಯಕ್ಷಗಾನ ರತ್ನ), ಹಡಗಲಿಯ ಆರ್.ಬಿ.ಗುರುಬಸವರಾಜï(ಶಿಕ್ಷಣ ರತ್ನ) ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಡಿಟರ್ ಸರ್ಪಭೂಷಣ, ಪ್ರಮುಖರಾದ ಎಲಿಗಾರ್ ಕುಬೇರಪ್ಪ. ಗ್ರಾಪಂ ಅಧ್ಯಕ್ಷ ಬಲ್ಲಾಹುಣ್ಸಿ ನಾಗರಾಜ್, ಕಾನಿಪ ಸಂಘದ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್, ಪ್ರಮುಖರಾದ ಕಣಿವೆಹಳ್ಳಿ ಮಂಜುನಾಥ್, ಎಂ.ಪಿ.ಎಂ.ಮಂಜುನಾಥ, ಪರಮೇಶ್ವರಯ್ಯ ಸೊಪ್ಪಿಮಠ್, ಜಿ.ಶ್ರೀನಿವಾಸ, ವಿ.ಹನುಮಂತ, ಜಿ.ಫಕ್ಕಿರಪ್ಪ ಉಪ್ಪಾರ, ಕನಕಪ್ಪ ಇದ್ದರು.