ಸೌಮ್ಯಲತಾ, ಚಂದ್ರಕಾಂತಗೆ ಪ್ರಶಸ್ತಿ ಪ್ರದಾನ

NRD SANMAN
Published on

ನರಗುಂದ: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಟ್ಟಣದ ಭಾರತೀಯ ಸಂಗೀತ ಮಹಾವಿದ್ಯಾಲಯದ ತಬಲಾ ಶಿಕ್ಷಕಿ ಸೌಮ್ಯಲತಾ ಸುಮಿತಕುಮಾರ ಇನಾಮದಾರ ಅವರಿಗೆ ಸಂಗೀತ ಸೇವಾ ರತ್ನ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ಶಿಕ್ಷಕ ಚಂದ್ರಕಾಂತ ಇನಾಮದಾರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಾ. ಪುನೀತ್ ರಾಜ್​ಕುಮಾರ ಜನ್ಮದಿನದ ಅಂಗವಾಗಿ ಕನ್ನಡ ?ಲಂ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿತ್ತು. ?ಲಂ ಚೇಂಬರ್ ಅಧ್ಯಕ್ಷ ಎಂ.ಎಸ್. ರವೀಂದ್ರ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ, ಲೋಕಾಯುಕ್ತ ಡಿವೈಎಸ್ಪಿ ಎಲ್.ವೈ. ರಾಜೇಶ, ಡಾ. ಹುಲಿಕಲ್ ನಟರಾಜ್, ಬಹುಭಾಷಾ ಚಿತ್ರನಟಿ ಭಾವನಾ ನಾಗೇಂದ್ರಸ್ವಾಮಿ, ಶಂಖನಾದ ಅಂಜನಪ್ಪ, ರವಿಕೃಷ್ಣಾರೆಡ್ಡಿ, ಡಾ.ಎನ್.ಎನ್. ಪ್ರಲ್ಹಾದ, ಡಾ.ರಾಘವ ದಾನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net