

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ನ ದತ್ತಿ ನಿಧಿ ಹಾಗೂ ದತ್ತಿ ಪ್ರಶಸ್ತಿಗಳು ನಾಡು ನುಡಿಯ ಪ್ರೇರಕ ಶಕ್ತಿ ಎಂದು ಬಸವನಬಾಗೇವಾಡಿ ಕಸಾಪ ಮಾಜಿ ಅಧ್ಯಕ್ಷ ನಿಂಗಪ್ಪ ಬೊಮ್ಮನಳ್ಳಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋ ಚೆನ್ನಬಸಪ್ಪನವರ ದತ್ತಿ ಹಾಗೂ ಡಾ. ರಮೇಶ ಕತ್ತಿ ಪ್ರತಿಷ್ಠಾಪಿತ ಕಡಣಿ ಸಾಹಿತ್ಯ ಸಮ್ಮೇಳನದ ದತ್ತಿ, ಕಡಣಿ ಗುರುವಂದನಾ ಗೆಳೆಯರ ಬಳಗ ಆಲಮೇಲದ ದತ್ತಿನಿಧಿ ಹಾಗೂ ದತ್ತಿ ಪ್ರಶಸ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಶಸ್ತಿಗಳು ಸಾಧಕರ ಜವಾಬ್ದಾರಿ ಹೆಚ್ಚಿಸುತ್ತವೆ. ಅದರಲ್ಲೂ ಕನ್ನಡ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು ನಾಡು&ನುಡಿ ಸೇವೆಗೆ ಮತ್ತಷ್ಟು ಶಕ್ತಿ ತುಂಬುತ್ತವೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿ, ಡಾ. ಸುರೇಖಾ ರಾಠೋಡ ಈ ಬಾರಿ ರಾಜ್ಯಮಟ್ಟದ ಕೋ. ಚೆನ್ನಬಸಪ್ಪ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದು ಹೆಮ್ಮೆ ಪಡುವ ಸಂಗತಿ ಎಂದರು. ಡಾ. ರಮೇಶ ಕತ್ತಿ ಮಾತನಾಡಿ, ಮಾಯಾಗುಹೆ ಮತ್ತು ಇತರ ಕಥೆಗಳು ಎಂಬ ಮಕ್ಕಳ ಕಥಾ ಸಂಕಲನ ಕೃತಿಗೆ ನವ್ಯಾ ಆರ್. ಕತ್ತಿ ಕಡಣಿ ಸಾಹಿತ್ಯ ಸಮ್ಮೇಳನ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.
ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ಕಡಣಿ ಗುರುವಂದನಾ ಗೆಳೆಯರ ಬಳಗ ಆಲಮೇಲ ನೀಡುವ ದತ್ತಿ ಪ್ರಶಸ್ತಿಗೆ ಈ ಬಾರಿ ಆಲಮೇಲದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀದೇವಿ ಶಾಂತಪ್ಪ ಬಿರಾದಾರ ಆಯ್ಕೆಯಾಗಿದ್ದು, ತಾಲೂಕಿನ ಕೀರ್ತಿ ಹೆಚ್ಚಿಸಿದೆ ಎಂದರು.
ಜಿಲ್ಲಾ ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಕೊಳಾರಿ, ನಾಗರಾಜ ಅಮರಗೊಂಡ, ಗುರು ಪಾಟೀಲ, ಪ್ರಾಣೇಶ ಪಾಟೀಲ, ಬಸವರಾಜ ಬಾಗೇವಾಡಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಅರ್ಜುನ ಶಿರೂರ , ವಿಜಯಲಕ್ಷಿ$್ಮ ಹಳಕಟ್ಟಿ, ಸಿದ್ರಾಮಪ್ಪ ಜಂಗಮಶೆಟ್ಟಿ, ಆನಂದರಾವ ಕುಲಕರ್ಣಿ, ಸಂಗೀತಾ ಪವಾರ, ಶಾಂತಾ ವಿಭೂತಿ, ಸಿದ್ಧರಾಮ ಬಿರಾದಾರ, ಜಿ.ಎಸ್ ಬಳ್ಳೂರ, ಶಿವಾಜಿ ಮೋರೆ, ರಾಹುಲ ಚವಾಣ್, ಸಮರ್ಥ ಚವಾಣ್, ಬಿ.ಎಚ್. ಪಾಟೀಲ, ಲತಾ ಗುಂಡಿ, ಗಂಗಮ್ಮ ರಡ್ಡಿ ಮತ್ತಿತರರಿದ್ದರು.
ಪರವೀನ ಶೇಖ ಸ್ವಾಗತಿಸಿದರು. ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಮಹಮ್ಮದ್ ಗೌಸ್ ಹವಾಲ್ದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಶೋಭಾ ಬಡಿಗೇರ ವಂದಿಸಿದರು.
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದ ನಾಗರಬೆಟ್ಟ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಖಿಲ ಅಹಮ್ಮದ್ ಎನ್. ಪಿಂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.