ಅಲಂಕೃತ ಗುಳ್ಳವ್ವ ಕೂಡಿಸಿದವರಿಗೆ ಪ್ರಶಸ್ತಿ

h10-gullavva
Published on

ಹುಬ್ಬಳ್ಳಿ: ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಮಂಗಳಾ ಮಹಿಳಾ ಮಂಡಳ ವತಿಯಿಂದ ಗುಳ್ಳವ್ವನ ಹಬ್ಬ ಆಚರಿಸಿದ್ದಲ್ಲದೇ ಅತ್ಯುತ್ತಮವಾಗಿ ಗುಳ್ಳವನ್ನು ಸಿಂಗರಿಸಿದವರಿಗೆ ಇತ್ತೀಚೆಗೆ ಬಹುಮಾನ ಕೊಡಲಾಯಿತು.

ಆಷಾಢ ಮಾಸದಲ್ಲಿ ಪ್ರತಿ ಮಂಗಳವಾರ ಗುಳ್ಳವ್ವನನ್ನು ಕೂಡಿಸಲಾಯಿತು. ಮಳೆ ಚೆನ್ನಾಗಿ ಬರಲೆಂದು ಪ್ರಾರ್ಥಿಸಿ, ಎರೆಮಣ್ಣಿನಿಂದ ಗುಳ್ಳವ್ವನನ್ನು ಮಾಡಿ ಅದಕ್ಕೆ ಜೋಳ, ಗೋಧಿ, ಕುಸುಬಿ ಧಾನ್ಯಗಳಿಂದ ಅಲಂಕಾರ ಮಾಡಲಾಗಿತ್ತು. ಅತ್ಯುತ್ತಮವಾಗಿ ಗುಳ್ಳವ್ವನನ್ನು ನಿರ್ವಿುಸಿ ಪ್ರತಿಷ್ಠಾಪಿಸಿದ ಸುವರ್ಣ ಸಂಗಳದ ಉಪ್ಪಿನ ಹಾಗೂ ನಾಗರತ್ನ ಅವರಿಗೆ ಗ್ಲೋಬಲ್ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಡಾ. ಶ್ರುತಿ ಹೆಗಡೆ ಅವರು ಬಹುಮಾನ ವಿತರಿಸಿದರು.

ನಂತರ ಜಾನಪದ ನೃತ್ಯ ಪ್ರಸ್ತುತಪಡಿಸಲಾಯಿತು. ಸಂಗೀತಾ ಚಂದಾವರಿ, ಲಿತಾ ಉಮರಾಣಿ, ಉಮಾ ಹಿರೇಮಠ, ಜ್ಯೋತಿ ಸುಸಂಗಿ, ವರಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net