

ವಿಶ್ವಕರ್ಮ ಸೇವಾ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದ್ದು, ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆಂಡಗಣ್ಣ ವಿಶ್ವಕರ್ಮ ತಿಳಿಸಿದರು.
ವಿಶ್ವಕರ್ಮ ಮಹಾ ಸಂಸ್ಥಾನದ ನೀಲಕಂಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆ.27ರಂದು ಮೈಸೂರು ಮೆಡಿಕಲ್ ಕಾಲೇಜಿನ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ವಿಶೇಷ ಅತಿಥಿಗಳಾಗಿ ಸರಿಗಮಪ ಖ್ಯಾತಿಯ ಪ್ರಗತಿ ಬಡಿಗೇರ್, ಮಜಾಭಾರತದ ವಿನೋದ್ ಗೊಬ್ಬರಗಾಲ ಭಾಗವಹಿಸುವರು. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೇ ದಿನಾಂಕ ಆ.10. ಹೆಚ್ಚಿನ ಮಾಹಿತಿಗೆ ಮೊ: 9743489608 ಸಂಪರ್ಕಿಸಬಹುದೆಂದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಾಚಾರ್, ಗೌರವ ಅಧ್ಯಕ್ಷೆ ಶಾಂತಮ್ಮ, ಖಜಾಂಚಿ ನಿಂಗಾಚಾರ್, ಉಪಾಧ್ಯಕ್ಷ ರಾಮಚಂದ್ರಾಚಾರ್, ಸಂಚಾಲಕ ರವಿಕುಮಾರ್ ಹಾಜರಿದ್ದರು.