ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

Upp_Achivement
Published on

ಉಪ್ಪಿನಂಗಡಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಬುಧವಾರ ವಿಶೇಷ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ನೀಟ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಅನ್ವರ್ ಮೊಹಮ್ಮದ್, ಅನ್ವರ್ ಸ್ವಾದಿಕ್, ರಷ್ಯಾದಲ್ಲಿ ಎಂಬಿಬಿಎಸ್ ಮಾಡಲು ತೆರಳಲಿರುವ ಕಾಲೇಜಿನ ಹಳೇ ವಿದ್ಯಾರ್ಥಿನಿ ಕೆ.ಆಯಿಷತುಲ್ ಮುಫೀದಾ, ವಿಜ್ಞಾನ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಸಾಧನೆ ಮಾಡಿದ ರಕ್ಷಿತಾ ಎನ್. ಅವರನ್ನು ಅಭಿನಂದಿಸಲಾಯಿತು.

ಸಿಇಟಿ ಹಾಗೂ ನೀಟ್ ತರಬೇತಿ ಬಗ್ಗೆ ಪಾಲಕರೊಂದಿಗೆ ಚರ್ಚಿಸಲಾಯಿತು. ಪ್ರಾಂಶುಪಾಲ ಇಬ್ರಾಹಿಂ ಎಂ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಜೀಜ್ ಬಸ್ತಿಕಾರ್ ಪ್ರಾಸ್ತಾಪಿಸಿದರು. ಸಿಇಟಿ ಮತ್ತು ನೀಟ್ ಪರೀಕ್ಷೆ ಕುರಿತು ಉಪನ್ಯಾಸಕಿ ಸುಲಕ್ಷಣ ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಬ್ದುಲ್ ರೆಹಮಾನ್, ಪಾಲಕ ಪ್ರತಿನಿಧಿ ಅಬ್ದುಲ್ ಮಜೀದ್ ಮಠ ಇದ್ದರು. ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಸೀತಾ ಲಕ್ಷ್ಮೀ ಸ್ವಾಗತಿಸಿದರು. ಡಾ.ಜನಾರ್ದನ್ ಗೌಡ ವಂದಿಸಿದರು. ಉಪನ್ಯಾಸಕಿ ಡಾ.ಮಂಜುಳಾ ಬಣಾಕರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net