ಸಾಧಕ 20 ವಿದ್ಯಾರ್ಥಿಗಳಿಗೆ ಸನ್ಮಾನ

08-09-24--krs1 (1)
Published on

ಕೆ.ಆರ್.ಸಾಗರ: ಬಸ್ತಿಪುರ ಬಳಿಯ ಕೆ.ಆರ್.ಸಾಗರ ರಸ್ತೆಯಲ್ಲಿರುವ ಕೆ.ಬಿ.ಎಲ್. ಸಿದ್ಧಿವಿನಾಯಕ ಟ್ರಸ್ಟ್, ಸಿಲಿಕಾನ್ ಸಿಟಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮೊದಲನೇ ವರ್ಷದ ಸಿದ್ಧಿ ವಿನಾಯಕ ದೇಗುಲದ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಮಂಡ್ಯ ಹಾಗೂ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ 20 ವಿದ್ಯಾರ್ಥಿಗಳನ್ನು ಶನಿವಾರ ಶ್ರೀ ಸಿದ್ಧಿವಿನಾಯಕ ದೇವಾಲಯದ ಆವರಣದಲ್ಲಿ ಸನ್ಮಾನಿಸಲಾಯಿತು.


ಶ್ರೀಸಿದ್ಧಿವಿನಾಯಕ ದೇವರಿಗೆ ಅಭಿಷೇಕ, ಹೋಮ, ಪೂಜೆ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕೆ.ಬಿ.ಎಲ್.ಸಿದ್ಧಿ ವಿನಾಯಕ ಟ್ರಸ್ಟ್ ಕಾರ್ಯದರ್ಶಿ ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಟ್ರಸ್ಟ್ ಪರಿಸರ ಉತ್ತಮಗೊಳಿಸಲು ನಾಲ್ಕು ಎಕರೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ಅವರು ಸಸಿ ನೆಟ್ಟು ಚಾಲನೆ ನೀಡಿದ ಆವರಣ ಹಾಗೂ ತಮ್ಮ ಬಡವಾಣೆಯಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.


ನಂತರ ತನ್ಮಯ ಶೆಟ್ಟಿ, ಎಲ್.ದರ್ಶಿನಿ, ಎ.ಸ್ಕಂದ, ಎಸ್.ವಿ.ಶ್ರೀಲತಾ, ಡಿ.ಎಸ್.ವಿಜಯಲಕ್ಷ್ಮೀ, ಎ.ಆರ್.ಬಬಿತಾ, ಎಸ್.ಆರ್.ಚಿರಂತ್, ಧನ್ಯತಾ.ಬಿ.ಗೌಡ, ವೈ.ಗಾನಶ್ರೀ, ವಿ.ಟಿ.ಬೃಂದಾ, ನಂದಿನಿ, ಆರ್.ಅಕ್ಷತಾ, ಆತ್ರಿಪ್ರಿಯಾ ಕೆ.ಪೂಜಾರಿ, ಜಿ.ಪ್ರಣತಿ, ಎಸ್.ಲೇಖನಾ, ಎನ್.ರೋಹಿತ್ ಅವರಿಗೆ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಹಿನ್ನೆಲೆಯಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.


ಕೆ.ಬಿ.ಎಲ್. ಆ್ಯಂಡ್ ಸನ್ಸ್ ಹಾಗೂ ಕೆ.ಬಿ.ಎಲ್. ಸಿದ್ಧಿ ವಿನಾಯಕ ಟ್ರಸ್ಟ್ ಅಧ್ಯಕ್ಷ ರವಿ, ನಿರ್ದೇಶಕರಾದ ಎಸ್.ಕಿರಣ್, ಕೆ.ಎನ್.ಸಂತೋಷ, ಮೋಹನ್, ಬಿ.ಎನ್.ಸುರೇಶ್, ಬಿ.ಬಿ.ಮಧುಕರ್, ವಿಜಯವಾಣಿ ಮೈಸೂರು ವಿಭಾಗದ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net