ಗಣನೀಯ ಸಾಧನೆಗೈದ ವೈದ್ಯರಿಗೆ ಸನ್ಮಾನ

10
Published on

ಮನುಷ್ಯನನ್ನು ಕಾಡುತ್ತಿರುವ ಸೋಂಕು ಮತ್ತು ಸೋಂಕೇತರ ಕಾಯಿಲೆಗಳನ್ನು ನಿಯಂತ್ರಿಸಲು ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಹೇಳಿದರು.


ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ 40ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿದ್ದು, ಅವೆಲ್ಲವೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿದರು. ಇದೇ ವೇಳೆ ಗಣನೀಯ ಸಾಧನೆಗೈದ ವೈದ್ಯರಾದ ಡಾ.ಟಿ.ಅಮರನಾಥ್, ಡಾ.ಕಾರ್ತಿಕ್ ಉಡುಪ, ಡಾ.ಶ್ರೀನಿವಾಸ ನಾಗರಾಜು, ಡಾ.ಆದಿತ್ಯ ಉಡುಪ, ಡಾ.ಬಿ.ಜಿ.ಪೊನ್ನಪ್ಪ ಹಾಗೂ ಡಾ. ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ಸಿಇಒ ಡಾ.ಎಂ.ವಿ.ಮಂಜುನಾಥ್, ನಿರ್ದೇಶಕಿ ಡಾ.ಯಶಿತಾ ರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net