ಇಕ್ಬಾಲ್​ ಮನ್ನಾಗೆ 'ವಿವೇಕಾನಂದ' ಪ್ರಶಸ್ತಿ ಪ್ರದಾನ

UDP-29-11-Ikbal(NEW)
Published on

ಸಾಮಾಜಿಕ ಕಾರ್ಯಕರ್ತನಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಪುರಸ್ಕಾರ

ಉಡುಪಿ: ಸಾಮಾಜಿಕ ಕಾರ್ಯಕರ್ತ ಎಂ.ಇಕ್ಬಾಲ್​ ಮನ್ನಾ ಅವರಿಗೆ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್​ ವತಿಯಿಂದ ಉಡುಪಿ ಬ್ರಹ್ಮಗಿರಿಯ ಲಯನ್ಸ್​ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ಪರಿಷತ್​ನ ಅಧ್ಯಕ್ಷ ಡಾ.ಶಂಕರ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ವಕೀಲ ರವಿಕಿರಣ್​ ಮುರ್ಡೇಶ್ವರ ಅವರು ನೂತನ ಜಿಲ್ಲಾಧ್ಯಕ್ಷ ಎಂ.ಇಕ್ಬಾಲ್​ ಕುಂಜಿಬೆಟ್ಟು ಸಹಿತ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿದರು.

ಪರಿಷತ್​ನ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ನಿಯೋಜಿತ ರಾಜ್ಯ ಕಾನೂನು ಸಲಹೆಗಾರ ಶ್ಯಾಮ್​ ಸುಂದರ್​ ನಾಯರಿ, ಸಾಮಾಜಿಕ ಕಾರ್ಯಕರ್ತ ಎಂ.ಫಾರೂಕ್​, ವಕೀಲ ಅಖಿಲ್​ ಬಿ.ಹೆಗ್ಡೆ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಸಂತೋಷ್​ ಕುಮಾರ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಸುವರ್ಣ, ಜೊತೆ ಕಾರ್ಯದರ್ಶಿ ಸದಾಶಿವ ಕೋಟೆಗಾರ್​, ಕಾನೂನು ಸಲಹೆಗಾರ ಹರ್ಷರಾಜ್​ ಉಪಸ್ಥಿತರಿದ್ದರು.

ಶಿವಕುಮಾರ್​ ಶೆಟ್ಟಿಗಾರ್​ ಸ್ವಾಗತಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net