ಉಮೇಶ ಅಂಗಡಿಗೆ ಪಿಎಚ್.ಡಿ ಪ್ರದಾನ

PHD
Published on

ರಟ್ಟಿಹಳ್ಳಿ: ತಾಲೂಕಿನ ಹಿರೇಮಾದಾಪುರ ಗ್ರಾಮದ ಉಮೇಶ ಅಂಗಡಿ ಅವರು ಡಾ.ಕೇಶವ ಶರ್ಮ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ನವೋದಯ ಕಾವ್ಯದ ಮೇಲೆ ಗಾಂಧಿವಾದದ ಪ್ರಭಾವ ಕುರಿತು ಮಂಡಿಸಿದ್ದ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.

ಶಿವಮೊಗ್ಗ ನಗರದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಪಕರಾಗಿರುವ ಉಮೇಶ ಅಂಗಡಿ ಅವರಿಗೆ ಶಂಕರಘಟ್ಟದ ಕುವೆಂಪು ವಿವಿ ಆವರಣದ ಜ್ಞಾನ ಸಹ್ಯಾದ್ರಿಯಲ್ಲಿ ಆಯೋಜಿಸಿದ್ದ 33ನೇ ವಾರ್ಷಿಕ ಘಟಿಕೋತ್ಸವದಲ್ಲಿ ಇಸ್ರೋದ ಪ್ರಾಧ್ಯಾಪಕ ಡಾ. ಸುರೇಶ ಬಿ.ಎನ್. ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಡಾ. ಗೀತಾ ಸಿ., ಡಾ. ನವೀನಕುಮಾರ ಎನ್, ಡಾ.ಬಿ.ಪಿ. ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net