ರೈತ ಮಹಿಳೆಯರಿಗೆ ‘ಕೃಷಿ ರತ್ನ’ ಪ್ರಶಸ್ತಿ ಪ್ರದಾನ

Raitha sangha
Published on

ಮೈಸೂರು: ರಾಜ್ಯ ರೈತ ಕಲ್ಯಾಣ ಸಂಘ ಮತ್ತು ಭೂಮಿಪುತ್ರ ರೈತಮಿತ್ರ ಆರ್ಗ್ಯಾನಿಕ್ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ರೈತ ಮಹಿಳೆಯರಿಗೆ ಕೃಷಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ರೈತ ಮಹಿಳೆಯರಾದ ನಾಗನಹಳ್ಳಿಯ ಮಂಜುಳಾ, ಎಚ್.ಡಿ. ಕೋಟೆಯ ನಾಗರತ್ನಮ್ಮ, ಹುಣಸೂರಿನ ಟಿ. ಪುಟ್ಟಮ್ಮ, ಬೀಚನಹಳ್ಳಿಯ ಪುಟ್ಟಸುಬ್ಬಮ್ಮ, ಬ್ಯಾಳಾರುವಿನ ವನಜಾಕ್ಷಿ ಅವರಿಗೆ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ, ಪದಾಧಿಕಾರಿಗಳಾದ ಹರೀಶ್ ಗೌಡ, ಮೂರ್ತಿ ಕೋಟೆ, ಸ್ವಾಮಿಗೌಡ, ಕಂದಸ್ವಾಮಿ ಯಡಿಯಾಲ, ಹೇಮಂತ್ ಕುಮಾರ್, ನವೀನ್ ಗೌಡ, ಗೋವರ್ಧನ್, ವೇಣು, ಅಭಿ, ಪುನೀತ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net