ಬೆಂಗಳೂರು: ಬಿ. ಎಂ. ಶ್ರೀ ಪ್ರತಿಷ್ಠಾನದ "ಬೆ.ಸು.ನ.ಮಲ್ಯ ಪ್ರಶಸ್ತಿ'ಗೆ ಪತ್ರಕರ್ತರಾದ ಪಿ. ರಮೇಶ್ ದೊಡ್ಡಪುರ ಮತ್ತು "ಮಹಾಮಾನವ ಅಗೋಳಿ ಮಂಜಣ್ಣ ಪ್ರಶಸ್ತಿ'ಗೆ ಕ್ರೀಡಾಪಟು ಚಂದ್ರಹಾಸ ರೈ ಅವರು ಆಯ್ಕೆಯಾಗಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 5 ಸಾವಿರ ರೂ. ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ. ಭಾನುವಾರ (ಆ. 31) ಬಿ. ಎಂ. ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಸತಿ ಪೋಷಕ ಕೆ.ಮೋಹನ್ದೇವ್ ಆಳ್ವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಪತ್ರಕರ್ತ ಟಿ. ಸುರೇಶ್, ಸಂಘಟಕ ಗಂಗಯ್ಯ ಮತ್ತು ಪ್ರಾಧ್ಯಾಪಕ ಚಂದ್ರಶೇಖರ್, ವಕೀಲ ನಂಜಪ್ಪ ಕಾಳೇಗೌಡರು ಇದ್ದರು.