

ಸುಂಟಿಕೊಪ್ಪ: ಕೊಡಗು ಹಿಂದು ಮಲಯಾಳ ಕ್ರಿಕೆಟ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಯಂಗ್ ಚಾಲೆಂಜರ್ ಐಗೂರು ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮಾದಾಪುರ ಹಿಂದು ಮಾಲಯಾಳ ಕುಟುಂಬ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪುರುಷರ ವಿಭಾಗಧ ಫೈನಲ್ ಪಂದ್ಯಾವಳಿಯಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ಹಾಗೂ ಇಲೆವನ್ ಸ್ಟಾರ್ ಕಂಬಿಬಾಣೆ ತಂಡಗಳ ನಡುವಿನ ರೋಚಕ ಪಂದ್ಯಾವಳಿ ಎಲ್ಲರ ಗಮನ ಸೆಳೆಯಿತು.
ಮೊದಲು ಬ್ಯಾಟ್ ಮಾಡಿದ ಕಂಬಿಬಾಣೆ ತಂಡ 6 ಓವರ್‌ಗಳಲ್ಲಿ 48 ರನ್ ಗಳಿಸಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ಯಂಗ್ ಚಾಲೆಂಜರ್ಸ್ ತಂಡ 5 ವಿಕೆಟ್ ಕಳೆದುಕೊಂಡು ಇನ್ನೂ 3 ಎಸೆತ ಬಾಕಿ ಇರುವಂತೆ 49 ರನ್‌ಗಳಿಸಿ ಗೆಲುವು ಸಾಧಿಸುವ ಮೂಲಕ 33,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ತಂಡವು 22,000 ರೂ. ಹಾಗೂ ಟ್ರೋಫಿ ಪಡೆಯಿತು.
ಐಗೂರು ತಂಡದ ಅಭಿಜಿತ್ ಬಿ ಜೌಟಗದೆ 27 ಬಾರಿಸುವ ಮೂಲಕ ಉತ್ತಮ ಬ್ಯಾಟ್ಸ್‌ಮ್ಯಾನ್ ಬಹುಮಾನ ಪಡೆದುಕೊಂಡರು.
ಮಹಿಳಾ ಕ್ರಿಕೆಟ್‌ನಲ್ಲಿ ಮಲ್ದಾರೆ ಪ್ರಥಮ ಹಟ್ಟಿಹೊಳೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಐಗೂರು ಭಜರಂಗಿ ಪ್ರಥಮ ಮಾಲ್ದಾರೆ ದ್ವಿತೀಯ ಸ್ಥಾನ ಪಡೆದುಕೊಂಡರು.