

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಶಿಸ್ತಿನಿಂದ ಅಭ್ಯಸಿಸಬೇಕು. ಯಶಸ್ಸು ಪ್ರಯತ್ನಶೀಲರ ಸ್ವತ್ತು. ಮಕ್ಕಳ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕರ್ನಾಟಕ ಬಾಲವಿಕಾಸ ಅಕಾಡೆಮಿಯಲ್ಲಿ ಗುರುವಾರ ಜರುಗಿದ ರಾಜ್ಯಮಟ್ಟದ ಪ್ರಬಂಧ- ಭಾಷಣ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಅಕಾಡೆಮಿ ಯೋಜನಾಽಕಾರಿ ಭಾರತಿ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲನಗೌಡ ಪಾಟೀಲ, ಬಸವರಾಜ ಮರಿತಮ್ಮನವರ, ವಿ.ಎಸ್. ರೇಷ್ಮಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದೀಪಾ ಜಾವೂರ, ಪುಷ್ಪಾ ಹಂಜಗಿ, ಸುವರ್ಣಲತಾ ಮಠದ, ಪದ್ಮಶ್ರೀ ಮೇಟಿ, ಅರ್ಪಿತಾ, ಶಿವಕುಮಾರ, ಅಶೋಕ, ಸ್ಟ್ಯಾನ್ಲಿ, ರವಿಕಿರಣ, ಇತರರಿದ್ದರು. ಅಮೃತ ಸಾಣಿಕೊಪ್ಪ ವಂದಿಸಿದರು.