ಶಿಕ್ಷಕ ವಿ.ಬಿ. ಹೂಗಾರಗೆ ಪ್ರಶಸ್ತಿ

award
Published on

ನರಗುಂದ: ಗದಗನ ಡಾ. ವಿ.ಬಿ.ಹಿರೇಮಠರ ಮಹಾವೇದಿಕೆ, ಡಾ. ವಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ, ಅಶ್ವಿನಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಕೊಡಮಾಡುವ ಕನ್ನಡದ ಶ್ರೇಷ್ಠಕವಿ ಹುಯಿಲಗೋಳ ನಾರಾಯಣರಾವ್, ಡಾ.ಚೆನ್ನವೀರ ಕಣವಿ ರಾಷ್ಟ್ರೀಯ ಪ್ರಶಸ್ತಿಗೆ ನರಗುಂದ ತಾಲೂಕಿನ ಬೆನಕನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಬ. ಹೂಗಾರ ಆಯ್ಕೆಯಾಗಿದ್ದಾರೆ. ಗದಗನ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಆ.27ರಂದು ನಡೆಯಲಿರುವ ಅಶ್ವಿನಿ ಪ್ರಕಾಶನದ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net