

ಮಡಿಕೇರಿ:
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೩ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ವಿಜಯವಾಣಿಯ ಇಬ್ಬರಿಗೆ ಪ್ರಶಸ್ತಿ ಲಭಿಸಿದೆ. ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ’’ಕೊಡಗಿನ ಕಿತ್ತಳೆ ಕಾಣೆ,ಬಟರ್ ಫ್ರೂಟ್‌ಗೆ ಮಣೆ’’ ವರದಿಗೆ ಪತ್ರಿಕೆಯ ಕೊಡಗು ಜಿಲ್ಲಾ ಹಿರಿಯ ವರದಿಗಾರ ಸುನಿಲ್ ಪೊನ್ನೇಟಿ ಪಡೆದುಕೊಂಡಿದ್ದಾರೆ. ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ’’ತುತ್ತಿಗೆ ಪರದಾಡುವ ವೃದ್ದ ಗಿರಿಜನರು’’ ವರದಿಗೆ ಪತ್ರಿಕೆಯ ಸೋಮವಾರಪೇಟೆ ತಾಲೂಕು ವರದಿಗಾರ ಹಿರಿಕರ ರವಿ ಪಾತ್ರರಾಗಿದ್ದಾರೆ.
ಉಳಿದಂತೆ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿ ಎ.ಎನ್. ವಾಸು, ಕ್ರೀಡಾ ವರದಿ ಪ್ರಶಸ್ತಿ ಕಾಯಪಂಡ ಶಶಿ ಸೋಮಯ್ಯ, ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿ ಕೆ.ಬಿ. ದಿವಾಕರ್, ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ ಎಂ.ಎನ್. ಚಂದ್ರಮೋಹನ್, ಅರಣ್ಯ ವನ್ಯಜೀವಿ ಪ್ರಶಸ್ತಿ ಜಗದೀಶ್ ಜೋಡುಬೀಟಿ, ಹೈನುಗಾರಿಕೆ ವರದಿ ಪ್ರಶಸ್ತಿ ಅಣ್ಣೀರ ಹರೀಶ್ ಮಾದಪ್ಪ, ಶೈಕ್ಷಣಿಕ ವರದಿ ಪ್ರಶಸ್ತಿ ಹೆಚ್.ಕೆ. ಜಗದೀಶ್, ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿ ವಿಷ್ಮಾ ಪೆಮ್ಮಯ್ಯ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿ ವಿಶ್ವ ಕುಂಬೂರು, ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿ ಮಲ್ಲಿಕಾರ್ಜುನ, ಆರೋಗ್ಯ ವರದಿ ಪ್ರಶಸ್ತಿ ಕೃಷ್ಣ ಸಿದ್ದಾಪುರ, ಕೃಷಿ ವರದಿ ಪ್ರಶಸ್ತಿ ಉದಿಯಂಡ ಜಯಂತಿ ಮಂದಣ್ಣ, ಅತ್ಯುತ್ತಮ ಸುದ್ದಿ ಛಾಯಾ ಚಿತ್ರ ಪ್ರಶಸ್ತಿ ರಂಗಸ್ವಾಮಿ, ಅತ್ಯುತ್ತಮ ಸಾಂಸ್ಕೃತಿಕ ವರದಿ ಪ್ರಶಸ್ತಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಡೆದುಕೊಂಡಿದ್ದಾರೆ.
. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.