

ಶಿವಮೊಗ್ಗ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿಯಲ್ಲಿ ಈ ಬಾರಿ ಶಿವಮೊಗ್ಗವೂ ಸ್ಥಾನ ಪಡೆದಿದೆ. ರಾಜ್ಯದಿಂದ ಮೂರು ನಗರಗಳು ಪ್ರಶಸ್ತಿಗೆ ಭಾಜನವಾಗಿದ್ದು ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ವಲಯ ಸ್ಮಾರ್ಟ್‌ಸಿಟಿ ವಿಭಾಗದಲ್ಲಿ ಬೆಳಗಾವಿ ಆಯ್ಕೆಯಾಗಿದೆ. ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿತು. ಪ್ರಶಸ್ತಿಯನ್ನು ಸೆ. 27ರಂದು ಇಂದೋರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಲಿದ್ದಾರೆ. ಇದರೊಂದಿಗೆ ಇತರ ವಿಭಿನ್ನ ವಿಭಾಗದಲ್ಲಿ ಇತರ ನಗರಗಳು 66 ಪ್ರಶಸ್ತಿಗಳನ್ನು ಪಡೆದಿವೆ.