

ಸೋಮವಾರಪೇಟೆ: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಇಲ್ಲಿನ ಜಯವೀರಮಾತೆ ದೇವಾಲಯಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರ ಸಂತ ಜೊಸೇಫರ ಚರ್ಚ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಿದ್ದಾಪಪುರ ಫ್ರೋರೆನ್ಸ್ ಚರ್ಚ್ ರನ್ನರ್‌ಅಪ್ ಆಯಿತು. ಪ್ರಥಮ ಸ್ಥಾನ ಪಡೆದ ತಂಡ 50 ಸಾವಿರ ರೂ. ನಗದು ಹಾಗೂ ದ್ವಿತೀಯ ಸ್ಥಾನದ ಪಡೆದ ತಂಡ 30 ಸಾವಿರ ರೂ.ನಗದಿನೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.
ಮಹಿಳೆಯರ ಥ್ರೋಬಾಲ್‌ನ ಪ್ರಥಮ ಸ್ಥಾನವನ್ನು ಅಬ್ಬೂರುಕಟ್ಟೆ ಲಾರೆನ್ಸ್ ಚರ್ಚ್ ಹಾಗೂ ಕುಶಾಲನಗರದ ಸಬಾಸ್ಟಿನ್ ಚರ್ಚ್ ದ್ವಿತಿಯ ಸ್ಥಾನ ಪಡೆಯಿತು. ಪುರುಷರ ಹಗ್ಗ ಜಗ್ಗಾಟದಲ್ಲಿ ನಾಪೋಕ್ಲು ಸಂತ ಮೇರಿ ಚರ್ಚ್ ತಂಡ ಪ್ರಥಮ, ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ ದ್ವಿತೀಯ ಸ್ಥಾನ ಪಡೆಯಿತು.
ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ.ಡಿಸಿಲ್ವ, ಒಎಲ್‌ವಿ ಚರ್ಚ್ ಧರ್ಮಗುರು ಎಂ. ರಾಯಪ್ಪ, ಸುಂಟಿಕೊಪ್ಪ ಚರ್ಚ್‌ನ ಧರ್ಮಗುರು ಸ್ವಾಮಿ ಅರುಳ್ ಸೆಲ್ವಕುಮಾರ್, ಹಟ್ಟಿಹೊಳೆ ಚರ್ಚ್ ಧರ್ಮಗುರು ಗಿಲ್ಬರ್ಟ್ ಡಿಸಿಲ್ವ ಬಹುಮಾನ ವಿತರಿಸಿದರು. ಮಡಿಕೇರಿ ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೋರಸ್, ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ, ಕ್ರೈಸ್ತ ಸೇವಾ ಸಂಘದ ಜಿಲ್ಲಾಧ್ಯಕ್ಷ ಬೇಬಿ ಮ್ಯಾಥ್ಯೂ ಸೇರಿದಂತೆ ಹಲವರು ಇದ್ದರು.