

ಹುಬ್ಬಳ್ಳಿ: ನಗರದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಮಂಗಳವಾರ ಆಚರಿಸಲಾಯಿತು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಮಾರುತಿ ಹಡಪದ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರರಾದ ಜಿ.ವಿ. ಪಾಟೀಲ, ರಘು ಬೊಮ್ಮನಹಳ್ಳಿ ಪಾಟೀಲ, ಪ್ರಮುಖರಾದ ದೇವರಾಜ ದಾಡಿಬಾವಿ, ಈರಣ್ಣ ಚಿಕ್ಬಳ್ಳಿಕಟ್ಟಿ, ನಿಂಗರಾಜ ಹಡಪದ, ಸಂಗಮೇಶ ಬೂದಿಹಾಳ, ಗುರುನಾಥ ಹಡಪದ. ಎಫ್.ಎಸ್. ತಂಬುದಮಣಿ, ಶಿವಾನಂದ ಹಡಪದ, ಫಕೀರೇಶ ಹಡಪದ, ಪ್ರಸನ್ನ ಕುರ್ತುಕೋಟಿ ಇತರರಿದ್ದರು.