

ಶಿಕಾರಿಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಬ್ಬ ವ್ಯಕ್ತಿಯಲ್ಲ, ಅದ್ಭುತ ಶಕ್ತಿ. ವಿರೋಧಿಗಳು ಸಾವಿರಾರು ತೊಂದರೆ ನೀಡಿದರೂ ಬಗ್ಗದ ಬಂಡೆ ಎಂದು ಡಿಕೆಶಿ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಕಲ್ಮನೆ ಗುಡ್ಡಳ್ಳಿ ಸುರೇಶ್ ಹೇಳಿದರು.
ಡಿಕೆಶಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಉಪ ಮುಖ್ಯಮಂತ್ರಿ ಡಿಕೆಶಿ ಜನ್ಮದಿನದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹ ನೀಡಲಾಗಿದೆ ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಹಾಗೂ ಕನ್ನಡದಲ್ಲಿ ಪೂರ್ಣಾಂಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಗಂಧದ ಗಿಡಗಳನ್ನು ನೆಡಲಾಯಿತು.
ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಆರ್.ಮೋಹನ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಪುರಸಭೆ ಸದಸ್ಯ ಉಳ್ಳಿ ದರ್ಶನ್, ಪ್ರಮುಖರಾದ ರಾಘವೇಂದ್ರ ನಾಯಕ್, ಪಾಲಾಕ್ಷಪ್ಪ ಗೌಡ, ಭಂಡಾರಿ ಮಾಲತೇಶ್, ಗಜೇಂದ್ರಪ್ಪ, ವೀರೇಶ್, ರಘುಪತಿ, ಶ್ರೀಕಾಂತ್, ಸಿದ್ದೇಶಣ್ಣ, ದೇವೆಂದ್ರಪ್ಪ, ಶೋಭಾ, ಪರಶುರಾಮ್, ಚರಣ್, ಆಹ್ಮದ್‌ಖಾನ್, ಮಂಜುನಾಯಕ್ ಇತರರಿದ್ದರು.