

ಕುಂದಾಪುರ: ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯನ್ನು ಒಳಗೊಂಡ ರೋಟರಿ ಜಿಲ್ಲೆ 3182ರಲ್ಲಿ ರೋಟರಿ ವರ್ಳ 2023-24 ಸಾಲಿನಲ್ಲಿ 51 ಕ್ಲಬ್ಗಳನ್ನೊಳಗೊಂಡ ಸಣ್ಣ ಕ್ಲಬ್ ವಿಭಾಗದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಸಂಸ್ಥೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ವೃತ್ತಿಪರ ಮಾಹಿತಿ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ, ರೋಟರಿ ದತ್ತಿ ನಿಧಿ, ಚತುರ್ವಿಧ ಪರೀಕ್ಷೆ, ರೋಟರಿ ಗ್ರಾಮೀಣದಳ, ಮಣ್ಣಿನ ಫಲವತ್ತತೆ ಮತ್ತು ಸಂರಕ್ಷಣೆ, ತ್ಯಾಜ್ಯ ವಸ್ತುಗಳ ನಿರ್ವಹಣೆ, ರಸ್ತೆ ಸುರಕ್ಷತೆ ಹಾಗೂ ಇನ್ನಿತರ ಸೇವೆಗಳಿಗೆ 27 ಪ್ರಶಸ್ತಿಗಳು ಲಭಿಸಿದೆ. ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.