ಎ. ಕೆ. ಜಯರಾಮ ಶೇಕ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

mng-24sep-jayaram sheka
Published on


ಮಂಗಳೂರು : ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್‌ನ 40ನೇ ಮಹಾ ಸಭೆ ನಗರದ ಬೆಂದೂರು ಸಂತ ಸೆಬಾಸ್ಟಿಯನ್ ಪ್ಲಾಟಿನಂ ಸಭಾಂಗಣದಲ್ಲಿ ನಡೆಯಿತು.
ದ.ಕ.ಬಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಮತ್ತು ಕರ್ನಾಟಕ ಬಸ್ ಮಾಲೀಕರ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯ ಆಟೋಮೊಬೈಲ್ ಉದ್ಯಮಿ ಎ.ಕೆ. ಜಯರಾಮ ಶೇಕ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.’
ಎ.ಕೆ. ಜಯರಾಮ ಶೇಕ ಅವರು ದೂರದೃಷ್ಟಿಯ ವ್ಯಾಪಾರ ನಾಯಕತ್ವ ಮತ್ತು ಉದ್ಯೋಗಿ ಕಲ್ಯಾಣಕ್ಕಾಗಿ ಬದ್ಧತೆಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಕಾರ್ಯದರ್ಶಿ ಕೆ. ವಿಲಾಸ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿದರು. ಉಪಾಧ್ಯಕ್ಷ ಹರ್ಷಕುಮಾರ್ ಕೇದಿಗೆ, ಕೋಶಾಧಿಕಾರಿ ಮಾರೂರ್ ಶಶಿಧರ್ ಪೈ, ಜಂಟಿ ಕೋಶಾಧಿಕಾರಿ ಕೆ.ಲಕ್ಷ್ಮೀ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಎ. ಕೆ. ಜಯರಾಮ ಶೇಕ ಮಾತನಾಡಿ ‘ 1972ರಲ್ಲಿ ಆರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ 15,000 ರೂ.ಗೆ ಖರೀದಿಸಿದ ಮೊದಲ ಬಸ್ ನನ್ನ ಯಶಸ್ಸಿಗೆ ಅಡಿಪಾಯ ಹಾಕಿತು. 50 ವರ್ಷ ಪೂರ್ತಿಗೊಳಿಸಿದ ನಂತರ ಡಾ. ಹೆಗ್ಗಡೆಯವರಿಗೆ ಬೆಳ್ಳಿಯ ಚಿಕಣಿ ಬಸ್ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದು, ಈಗ ಅವರ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ನಾನು ಕೇವಲ 8 ನೇ ತರಗತಿಯವರೆಗೆ ಓದಿದ್ದರೂ, ಇತರರಿಂದ ಕಲಿಯುವುದು ನನಗೆ ಜ್ಞಾನದ ಸಂಪತ್ತು ನೀಡಿತು ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 19 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ್ ಪೈ ಸ್ವಾಗತಿಸಿದರು. ಟಿ. ರತ್ನಾಕರ ಪೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net