

ಜಮಖಂಡಿ: ಪಿಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆಗೆ ಬೆಸ್ಟ್ ಫರ್ಪಾಮನ್ಸ್ ಇನ್ ಯುಎಲ್‌ಬಿ ಪ್ರಶಸ್ತಿಯನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪೌರಾಯುಕ್ತ ಜ್ಯೋತಿಗಿರೀಶ ಎಸ್. ಅವರಿಗೆ ನೀಡಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ನಡೆದ ಪಿಎಂ ಸ್ವ-ನಿಧಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಗರ, ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೌರಾಯುಕ್ತ ಜ್ಯೋತಿಗಿರೀಶ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಮಖಂಡಿ ನಗರಸಭೆಯಲ್ಲಿ ಈ ಯೋಜನೆ ಯಶಸ್ವಿಗೊಳಿಸಲು ಸಮುದಾಯ ಸಂಘಟಕ ರೂಪೇಶ ಘಾಟಗೆ ಶ್ರಮಿಸಿದ್ದಾರೆ.