

ಮಂಗಳೂರು: ಸೊಸೈಟಿ ವ್ಯವಹಾರದಲ್ಲಿ ಉತ್ತಮ ಗ್ರಾಹಕ ಸೇವೆ ನೀಡಿ, ಸರ್ವತೋಮುಖ ಪ್ರಗತಿ ಸಾಧಿಸಿ ಸಾಧನೆ ಮಾಡಿದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಅಶೋಕ್ ಶೇಟ್ ಅವರಿಗೆ ಪ್ರಶಸ್ತಿ ನೀಡಿದರು. ದೈವಜ್ಞ ಸೊಸೈಟಿಯ ಸಿಇಒ ಎಂ.ಸಂತೋಷ್ ಶೇಟ್, ನಿರ್ದೇಶಕ ಗಜೇಂದ್ರ ಶೇಟ್ ಮೊದಲಾದವರು ಉಪಸ್ಥಿತರಿದ್ದರು.