ಆರಾಧ್ಯ ಸ್ಟ್ರೈಕರ್ಸ್ ತಂಡಕ್ಕೆ ಪ್ರಶಸ್ತಿ

14
Published on

ಮೈಸೂರು: ಆರಾಧ್ಯ ಪ್ರೀಮಿಯರ್ ಲೀಗ್ ಸೀಸನ್-2 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಆರಾಧ್ಯ ಸ್ಟ್ರೈಕರ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಜೆ.ಪಿ.ನಗರದ ಪುಟ್ಟರಾಜ ಗವಾಯಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟೂರ್ನಿಯಲ್ಲಿ ಈ ಸಾಧನೆ ಮಾಡಿತು. ನಂದಿಪುರ ರಾಮಾರಾಧ್ಯ ಹಾಗೂ ಪತ್ರಕರ್ತ ಬೆಕ್ಕರೆ ಸತೀಶ್ ಆರಾಧ್ಯ ಮಾಲೀಕತ್ವದ ಹಾಗೂ ಕಿರಣ್ ಆರಾಧ್ಯ ನಾಯಕತ್ವದ ಮೈಸೂರಿನ ಆರಾಧ್ಯ ಸ್ಟ್ರೈಕರ್ಸ್ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪಂದ್ಯದಲ್ಲಿ ಕನಕಪುರದ ಪಂಚಾಚಾರ್ಯ ತಂಡದ ವಿರುದ್ಧ 30 ರನ್ ಅಂತರದಿಂದ ಗೆಲುವು ಸಾಧಿಸಿತು. ಆ ಮೂಲಕ 25 ಸಾವಿರ ನಗದು ರೂ. ಬಹುಮಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net