

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿವಿಯ ಕೀಟಶಾಸ ವಿಭಾಗದ ಮುಖ್ಯಸ್ಥ ಡಾ.ಎ.ಜಿ.ಶ್ರೀನಿವಾಸ ಕೀಟ ನಿಯಂತ್ರಣದಲ್ಲಿ ವಿನೂತನ ಪದ್ಧತಿ ಅವಿಷ್ಕಾರಕ್ಕಾಗಿ ಗಿರಿಯಪ್ಪಗೌಡ ಅತ್ಯುತ್ತಮ ಕೃಷಿ ಸಂಶೋಧನಾ ವಿಜ್ಞಾನಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜೀನರಾಗಿದ್ದಾರೆ.
ಬೆಂಗಳೂರು ಕೃಷಿ ವಿಜ್ಞಾನಗಳ ವಿವಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದಿಂದ ನೀಡಲಾಗುವ ಗಿರಿಯಪ್ಪಗೌಡ ಅತ್ಯುತ್ತಮ ಕೃಷಿ ಸಂಶೋಧನಾ ವಿಜ್ಞಾನಿ ಪ್ರಶಸ್ತಿಯನ್ನು ಬೆಂಗಳೂರು ಕೃಷಿ ವಿಜ್ಞಾನಿಗಳ ವಿವಿಯ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ರಸಾಯನಿಕ ಕೀಟನಾಶಕಗಳನ್ನು ಬಳಸದೇ ಪ್ರಮುಖ ಕೀಟಗಳನ್ನು ಸಂಪೂರ್ಣ ಹತೋಟಿ ಮಾಡುವ ವಿಧಾನವನ್ನು ಡಾ.ಎ.ಜಿ.ಶ್ರೀನಿವಾಸ ಕಂಡು ಹಿಡಿದಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಪರಿಸರ ಪ್ರಭಾವ ವೌಲ್ಯಮಾಪನ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಡಾ.ಬಿ.ಪಿ.ರವಿ, ಬೆಂಗಳೂರು ಕೃಷಿ ವಿವಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಎಚ್.ಎಲ್.ಹರೀಶ ಹಾಗೂ ಪದಾಕಾರಿಗಳು ಉಪಸ್ಥಿತರಿದ್ದರು.