ವಾರ್ಷಿಕ ಪ್ರಶಸ್ತಿಗೆ ನಾಲ್ವರ ಆಯ್ಕೆ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

Pro.Jayaprakashgowda
Published on

ಮಂಡ್ಯ: ಕರ್ನಾಟಕ ಸಂಘದಿಂದ ವಿವಿಧ ವಿಭಾಗದಲ್ಲಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

2023ನೇ ಸಾಲಿನ ಎ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದವರೂ ಆದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಕೆ.ಎಂ.ಬಸವರಾಜು, ಸಿ.ನಾಗರಾಜು ಜನಪದ ಕಲಾ ಪ್ರಶಸ್ತಿಗೆ ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಪೂಜಾ ಕುಣಿತ ಕಲಾವಿದ ಕೆ.ಪಿ.ದೇವರಾಜು, ಗುಣಸಾಗರಿ ನಾಗರಾಜು ಜನಪದ ಕಲಾ ಪ್ರಶಸ್ತಿಗೆ ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ಪೂಜಾ ಕುಣಿತ ಕಲಾವಿದೆ ಸವಿತಾ ಚೀರುಕುನ್ನಯ್ಯ ಹಾಗೂ ಚೆನ್ನಮ ಕರಿಯಪ್ಪ ಜನಪದ ಕಲಾ ಪ್ರಶಸ್ತಿಗೆ ಪಾಂಡವಪುರ ತಾಲೂಕು ಮೇನಾಗರ ಗ್ರಾಮದ ಜಾನಪದ ಹಾಡುಗಾರ್ತಿ ಸರೋಜಮ್ಮ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಏ.7ರಂದು ನಗರದ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಂಜೆ 5.30ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಪುರಸ್ಕೃತರಿಗೆ ನಗದು ಸೇರಿದಂತೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ವಹಿಸಲಿದ್ದು, ಸಮಾಜಸೇವಕ ಎಸ್.ಎ.ಪುಟ್ಟರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ಸಂಘದ ಪದಾಧಿಕಾರಿಗಳಾದ ಪಿ.ಲೋಕೇಶ್ ಚಂದಗಾಲು, ನಾಗಪ್ಪ ಹನಕೆರೆ, ಉದಯ್‌ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net