ಪ್ರಶಸ್ತಿ ಪ್ರದಾನ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘವು ಲಲಿತಾ ಮತ್ತು ಪ್ರೊ. ಸಿ.ವಿ. ಕೆರಿಮನಿ ದತ್ತಿ ನಿಮಿತ್ತ ಜ. 4ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡತಿಯರು ವಿಷಯದ ಕುರಿತು ಉಪನ್ಯಾಸ ಹಾಗೂ ಸಾಹಿತ್ಯ ದಂಪತಿ ಪ್ರಶಸ್ತಿ ಪ್ರದಾನ ಏರ್ಪಡಿಸಲಾಗಿದೆ.

ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರ ಯ. ರು. ಪಾಟೀಲ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಕೊಡುಗೆ ಪರಿಗಣಿಸಿ ಲಲಿತಾ ಮತ್ತು ಪ್ರೊ.ಸಿ.ವಿ. ಕೆರಿಮನಿ ದಂಪತಿ ಹೆಸರಿನಲ್ಲಿ ನೀಡುವ "ಸಾಹಿತ್ಯ ದಂಪತಿ ಪ್ರಶಸ್ತಿ-2025'ಯನ್ನು ಪ್ರಕಾಶ ಕಡಮೆ ಮತ್ತು ಸುನಂದಾ ಕಡಮೆ ದಂಪತಿಗೆ ಸಾಹಿತಿ ರಂಜಾನ ದರ್ಗಾ ಪ್ರದಾನ ಮಾಡುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net