ನಡುವಿನಕೇರಿಗೆ ಪ್ರಶಸ್ತಿ ಪ್ರದಾನ

Award presentation to the middleman
ಡಾ.ಎಚ್​.ಬಿ.ನಡುವಿನಕೇರಿ
Published on

ತಾಳಿಕೋಟೆ: ಪಟ್ಟಣದ ಎಸ್​.ಎಸ್​. ವಿದ್ಯಾಸಂಸ್ಥೆಯ ಎಚ್​.ಎಸ್​.ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್​.ಬಿ.ನಡುವಿನಕೇರಿ ಅವರಿಗೆ ಕಲಬುರಗಿಯಲ್ಲಿ ಭಾನುವಾರ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

ನಡುವಿನಕೇರಿ ಅವರು ಶೈಣಿಕ, ಸಮಾಜ, ಧರ್ಮ, ಸಾಹಿತ್ಯ, ಸಾಂಸತಿಕ, ಕನ್ನಡ ನಾಡು ನುಡಿ, ಭಾಷಾ ಸಂಸತಿ ಕುರಿತು ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಸಿರಿಗನ್ನಡ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಂಸ್ಥೆಯ ಸಂಸ್ಥಾಪಕ ಎಚ್​.ಎಸ್​.ಪಾಟೀಲ, ಕಾರ್ಯದರ್ಶಿಗಳಾದ ಕಿರಣ ಪಾಟೀಲ, ಸಚಿನ ಪಾಟೀಲ, ಸಿಬ್ಬಂದಿ ಆರ್​.ಆರ್​.ಬಡಗಣ, ಸುರೇಶ ಪಾಟೀಲ, ಪಿ.ಎಂ.ಚಲವಾದಿ, ಗಾಯತ್ರಿ ಪತ್ತಾರ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net