

ಬಸವನಬಾಗೇವಾಡಿ: ಸಹಕಾರಿ ೇತ್ರದಲ್ಲಿ 40 ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದ ಪಟ್ಟಣದ ಬಸವೇಶ್ವರ ಕೋ& ಆಪ್ ಬ್ಯಾಂಕ್ ಅಧ್ಯ, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಲೋಕನಾಥ ಅಗರವಾಲ ಅವರು 2024&25ನೇ ಸಾಲಿನ ರಾಜ್ಯ ಸರ್ಕಾರ ಕೊಡುವ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನ.17 ರಂದು ಬಾಗಲಕೋಟೆ ನಗರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರಿ ಸಚಿವ ಎನ್.ರಾಜಣ್ಣ, ಸಚಿವ ಶಿವಾನಂದ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.