ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರಿಗೆ ಪ್ರಶಸ್ತಿ ಪ್ರದಾನ

h28-huligemma
Published on

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಸಂಸ್ಥಾಪಕಿ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ‘ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆ, ತುಮಕೂರಿನ ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್​ನ್ಯಾಷನಲ್ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಾಡೋಜಾ, ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರ 113ನೇ ಜನ್ಮದಿನದ ಸಂಭ್ರಮ, ಸಾಲುಮರದ ತಿಮ್ಮಕ್ಕನವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ, ಅರಣ್ಯ ಸಚಿವ ಈಶ್ವರ ಖಂಡ್ರೆ ಇತರರು ಪ್ರಶಸ್ತಿ ಪ್ರದಾನ ಮಾಡಿದರು.

ಸಾಲುಮರದ ತಿಮ್ಮಕ್ಕನವರ ಸುಪುತ್ರ ಉಮೇಶ ಬಳ್ಳೂರ, ಭಾರತೀಯ ಸೇವಾ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ (ಹೂಡಿ ಚಿನ್ನಿ), ಹೈಕೋರ್ಟ್ ನ್ಯಾಯವಾದಿ ಡಾ. ಹೇಮಂತ್ ಕರ್ಜಗಿ ಇತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಗೋವಾ ಸೆಲ್ಸೇಟ್ ತಾಲೂಕು ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಮಲ್ಲಯ್ಯ ಗಾಯಕವಾಡ, ವಿಠ್ಠಲ ಏಕಬೋಟೆ, ಪ್ರಕಾಶ ಅರಗಂಜಿ, ರಾಜು ತಾಂಬೆ, ರಫೀಕ್ ಗುರಿಕಾರ, ರಂಜಿತಕುಮಾರ, ಸಂತೋಷ ಬನ್ನಿಕೊಪ್ಪ, ಮಂಜುನಾಥ ಮಾಗಡಿ, ಜೆ.ಕೆ. ಹಳ್ಳಿಕೇರಿ, ಗೋಪಾಲ ಶೆಲ್ಲಿಕೇರಿ, ಅಜಯ ಶೇರಖಾನೆ, ಬಂಗಾರಪ್ಪ ಸಜ್ಜನಗೌಡರ, ಪರಶುರಾಮ ಸುಳ್ಳದ, ಮನೋಹರ ಹಿಂಡಿ, ಸಾಗರ, ರವಿಕುಮಾರ ಮಡ್ಡಿ, ಶಾರದಮ್ಮ ಭೋಜಗಾರ, ವಿದ್ಯಾ ದಾಗಿನದಾರ, ಸವಿತಾ ಭೋಜಗಾರ, ರೇಣುಕಾ ಸಜ್ಜನಗೌಡರ, ಶ್ರೀನಿಧಿ ದಾಗಿನದಾರ ಸೇರಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net