

ಮುಂಡರಗಿ: ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೊಡ ಮಾಡುವ ಅತ್ಯುತ್ತಮ ಸಾಧಕ -2023ರ ರಾಜ್ಯ ಪ್ರಶಸ್ತಿಗೆ ಪಟ್ಟಣದ ಉದ್ಯಮಿ ಕರಬಸಪ್ಪ ಹಂಚಿನಾಳ ಅವರು ಭಾಜನರಾಗಿದ್ದಾರೆ. ರಾಯಚೂರಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ರಾಜ್ಯ ಘಟಕ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ರಾಯಚೂರು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಸೆ. 2ರಂದು ಸಂಜೆ 7 ಗಂಟೆಗೆ ಜರುಗುವ ಅತ್ಯುತ್ತಮ ಸಾಧಕ -2023ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಬಸಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.