ಪ್ರಶಸ್ತಿ ಪ್ರದಾನ, ಉಪನ್ಯಾಸ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚೆನ್ನವಿರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ನಿಮಿತ್ತ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವಿರ ಕಣವಿ ಕಾವ್ಯ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆ ಬಹುಮಾನ ವಿತರಣೆ, ವಿಶೇಷ ಉಪನ್ಯಾಸವನ್ನು ಜೂ. 28ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಏರ್ಪಡಿಸಲಾಗಿದೆ.
ಬೆಂಗಳೂರಿನ ಹಿರಿಯ ವಿಮರ್ಶಕ ಎಸ್​.ಆರ್​. ವಿಜಯಶಂಕರ ಚೆನ್ನವಿರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು ಕುರಿತು ಉಪನ್ಯಾಸ ನೀಡುವರು. ಚಿಂತಕ ಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡುವರು. ಸಾಹಿತಿ ಶ್ರೀಧರ ಗಸ್ತಿ ನಿರ್ಣಾಯಕರ ನುಡಿಗಳನ್ನಾಡುವರು. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಿವಾನಂದ ಕಣವಿ, ಕರುಣಪ್ರಸಾದ ಕಣವಿ, ರಂಜನಾ ಮತ್ತು ಡಾ. ಅಶೋಕ ಗೋದಿ ಉಪಸ್ಥಿತರಿರುವರು.
ನಾಡೋಜ ಚೆನ್ನವಿರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಚಾಮರಾಜನಗರದ ಆರ್​. ದಿಲೀಪ್​ (ಪ್ರಥಮ), ಯಾದಗಿರಿಯ ಮಹೇಶ್ವರಿ ಅಲ್ಕೂರ (ದ್ವೀತಿಯ), ಧಾರವಾಡದ ಕವಿತಾ ವೀರನಗೌಡ ಪಾಟೀಲ (ತೃತೀಯ), ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ರೋಣದ ಡಾ. ಅಂದಯ್ಯ ಅರವಟಗಿಮಠ (ಪ್ರಥಮ), ಕುಣಿಗಲ್​ನ ಬೋರೆಗೌಡ ಕೆ.ಎನ್​ (ದ್ವೀತಿಯ), ಮಾನವಿಯ ಸಂಜೀವ ಜಗ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net