

ಧಾರವಾಡ: ನಗರದ ಜಾನಪದ ಸಂಶೋಧನ ಕೇಂದ್ರ, ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ಪ್ರತಿಷ್ಠಾನ ವತಿಯಿಂದ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬೀಳಗಿಯ ತತ್ವಪದ ಕಲಾವಿದ ರಂಗಪ್ಪ ಹಲಕುರ್ಕಿ ಅವರಿಗೆ ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಆನಂದ ಪಾಂಡುರಂಗಿ, ಶಂಕರ ಹಲಗತ್ತಿ, ಡಾ. ಬಂಡು ಕುಲಕರ್ಣಿ, ಪ್ರಕಾಶ ಉಡಿಕೇರಿ, ವಿಶ್ವೇಶ್ವರಿ ಹಿರೇಮಠ, ನಾಗಭೂಷಣ ಹಿರೇಮಠ, ಇತರರು ಇದ್ದರು.