ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರಶಸ್ತಿಯ ಗರಿ

Pes
Published on

ಮಂಡ್ಯ: ನಗರದ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಐಎಸ್‌ಟಿಇ(ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್) ಅಧ್ಯಾಪಕ ಅಧ್ಯಾಯವು ಕರ್ನಾಟಕ ವಿಭಾಗದಿಂದ ‘ಅತ್ಯುತ್ತಮ ಅಧ್ಯಾಪಕ ಅಧ್ಯಾಯ ಪ್ರಶಸ್ತಿ’ಗೆ ಪಾತ್ರವಾಗಿದೆ.
ಕರ್ನಾಟಕ ವಿಭಾಗದಲ್ಲಿ ಅಧ್ಯಾಯಗಳಲ್ಲಿನ ಒಟ್ಟಾರೆ ನಾಯಕತ್ವ ಮತ್ತು ಚಟುವಟಿಕೆಗಳ ಪ್ರಮಾಣದ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಲಾಯಿತು. ರಾಜ್ಯದಲ್ಲಿ 160 ಐಎಸ್‌ಟಿಇ ಅಧ್ಯಾಪಕ ಅಧ್ಯಾಯಗಳು ಕಾರ್ಯನಿರ್ವಹಿಸುತ್ತಿವೆ. ಜು.21ರಂದು ಬೆಂಗಳೂರಿನ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸಮಾವೇಶದಲ್ಲಿ ಪಿಇಎಸ್ ಕಾಲೇಜಿನ ಅಧ್ಯಾಯದ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ, ಕಾರ್ಯದರ್ಶಿ ಡಾ.ಎಂ.ಎನ್.ವೀಣಾ, ಪ್ರೊ.ಸೌಮ್ಯಶ್ರೀ ಮತ್ತು ಪ್ರೊ.ಚೈತ್ರಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಅತ್ಯುತ್ತಮ ಅಧ್ಯಾಪಕ ಅಧ್ಯಾಯದ ತಂಡವನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಮತ್ತು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net