ಪುರಸ್ಕಾರ ಉಜ್ವಲ ಬದುಕಿಗೆ ದಾರಿದೀಪ

31 10 2025_BGR_RURAL-PAGE_03
ನೆಲಮಂಗಲದ ಸುಭಾಷ್​ನಗರದ ವಿಶಾಲ್​ ಆಂಗ್ಲ ಶಾಲೆಯ ವಿದ್ಯಾರ್ಥಿಗಳಿಗೆ ವಿಜಯವಾಣಿ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎನ್​ಗ್ರೇವ್​ ಮೈಂಡ್ಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎ. ಕಲಾಶಂಕರ್​, ವಿಶಾಲ್​ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಟಿ.ಕೆ.ನರಸೇಗೌಡ ಇತರರು ಇದ್ದರು.
Published on

ನೆಲಮಂಗಲ : ನಗರದ ಸುಭಾಷ್​ ನಗರದ ವಿಶಾಲ್​ ಆಂಗ್ಲ ಶಾಲೆಯಲ್ಲಿ ಗುರುವಾರ "ವಿಜಯವಾಣಿ' ಹಾಗೂ ವಿಶಾಲ್​ ಆಂಗ್ಲ ಶಾಲೆ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಎನ್​ಗ್ರೇವ್​ ಮೈಂಡ್ಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎ.ಕಲಾಶಂಕರ್​ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಷ್ಟ, ಸಮಸ್ಯೆಗಳಿವೆ. ಅವುಗಳನ್ನು ಎದುರಿಸಲು ಧನಾತ್ಮಕ ಚಿಂತನೆ ಅಗತ್ಯ. ವಿದ್ಯಾರ್ಥಿಗಳಿಗೆ ರ್ನಿದಿಷ್ಟ ಗುರಿ ಹಾಗೂ ಸಾಧಿಸುವ ಛಲ ಇರಬೇಕು. ಪುರಸ್ಕಾರ ಉಜ್ವಲ ಬದುಕಿಗೆ ದಾರಿದೀಪವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ "ವಿಜಯವಾಣಿ' ಕಾರ್ಯ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಶಾಲ್​ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಟಿ.ಕೆ.ನರಸೇಗೌಡ ಮಾತನಾಡಿ, 20 ವರ್ಷಗಳಿಂದಲೂ ಶಾಲೆಗೆ ಅತ್ಯುತ್ತಮ ಫಲಿತಾಂಶ ದೊರಕಿದೆ. ರಾಜ್ಯಮಟ್ಟದಲ್ಲಿ ವಿಶಾಲ್​ ಶಾಲೆಯನ್ನು ಗುರುತಿಸಿ, ರಾಜ್ಯವೇ ಶಾಲೆಯತ್ತ ತಿರುಗಿ ನೋಡುವ ಕೆಲಸವಾಗುತ್ತಿದೆ. ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು. ಎಸ್​ಎಸ್​ ಪಬ್ಲಿಕ್​ ಶಾಲೆ ಅಧ್ಯಕ್ಷ ಸೂ.ಡಿ.ಸುರೇಶ್​ ಮಾತನಾಡಿ, ಪತ್ರಿಕೆ ಹೆಸರಿನಲ್ಲಿ ಹಣ ಮಾಡುವ ಸಂಸ್ಥೆಗಳ ನಡುವೆ ವಿಜಯವಾಣಿ ಸಂಸ್ಥೆ ಸಮಾಜದಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡು ರಾಜ್ಯದಲ್ಲಿ ನಂಬರ್​ ಒನ್​ ಪತ್ರಿಕೆಯಾಗಿ ಜನರ ಮನಸಲ್ಲಿ ಬೇರೂರಿದೆ. ವಿದ್ಯಾರ್ಥಿಗಳು ಪರೀೆಯಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಸಮಗ್ರ ಅಧ್ಯಯನ ಮಾಡಬೇಕು. ಬುದ್ಧಿವಂತಿಕೆ ಜತೆಗೆ ಶುದ್ಧ ಬರವಣಿಗೆ ಇದ್ದರೆ ಸಾಧನೆ ಹಾದಿ ಸುಲಭ ಎಂದರು. ಎಸ್​ಎಲ್​ಎನ್​ ಶೈಕ್ಷಣಿಕ ಮತ್ತು ಸಾಮಾಜಿಕ ಟ್ರಸ್ಟ್​ ಕಾರ್ಯದರ್ಶಿ ಟಿ.ಎನ್​.ಮಿಥುನ್​ಗೌಡ, ವಿಶಾಲ್​ ಆಂಗ್ಲ ಶಾಲೆ ಮುಖ್ಯಶಿಕ್ಷಕ ಚಿಕ್ಕರುದ್ರಪ್ಪ, ಶಿಕ್ಷಕರಾದ ಎಂ.ಶಿವಕುಮಾರ್​, ಶಾರದಾ, ಶೀಲಾ , ಆರ್​.ಪ್ರಿಯಾಂಕ್​, ಜ್ಯೋತಿನಾಯಕ್​, ಎಸ್​.ಮಂಜುಳಾ, ವಿಜಯವಾಣಿ ಪ್ರಸರಣ ವಿಭಾಗದ ನಾಗರಾಜು ನಂದಿಹಳ್ಳಿ, ಪತ್ರಿಕಾ ಪ್ರತಿನಿಧಿ ಎಂ.ಪ್ರಕಾಶ್​ ಇತರರು ಇದ್ದರು.

ಅವಳಿ ಸಹೋದರಿಯರ ಸಾಧನೆ : ಚಿಕ್ಕಂದಿನಿಂದಲೂ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ಶಿಕ್ಷಕರ ಮಾರ್ಗದರ್ಶನ, ಪಾಲಕರ ಸಹಕಾರದಿಂದ ಉತ್ತಮ ಅಂಕಗಳಿಸಲು ಸಾಧ್ಯವಾಗಿದೆ. ಸಾಧನೆಗೆ ಬೆಂಬಲಿಸಿದ ಪಾಲಕರು, ಶಿಕ್ಷಕರು ಹಾಗೂ ಸಾಧನೆ ಗುರುತಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು ಎಂದು ಅವಳಿ ಸಹೋದರಿಯಾದ ಆರ್​.ಧರಣಿ ಮತ್ತು ಆರ್​.ಧರಿತ್ರಿ ಹರ್ಷ ವ್ಯಕ್ತಪಡಿಸಿದರು.

ಪ್ರತಿಭಾ ಪುರಸತ ವಿದ್ಯಾರ್ಥಿಗಳು : ಆರ್​.ಧರಣಿ ಶೇ.99.06, ಆರ್​.ಧರಿತ್ರಿ ಶೇ.98.6, ಕುಶಾಲ್​ಸಂಪತ್​, ಶೇ.98.08, ಕೆ.ಗಗನ್​ಗೌಡಸ್​ ಶೇ.98.08, ಜಿ.ಲಿಖಿತ್​ ಶೇ.97.6, ತನುಸಿದ್ಧಿ ಶೇ.96.32, ಅಫೀಪ ನಾಜ್​ ಶೇ.94.4, ಪ್ರಾಥನಾ.ಸಿ.ಮದಾನಿ ಶೇ.94.24, ರಾಜ್​ ಮಣಿ ಶೇ.91.84, ಎಚ್​.ಚಂದನ. ಶೇ.90.88, ಎಂ.ಡಿ.ಕವನಾ ಶೇ.90.72, ಎಂ.ಕುಶಾಲ್​ ಶೇ.90.8, ಕೆ.ವಿದ್ಯಾಶ್ರೀ ಶೇ.88.8, ಭಾವನಾ ಶೇ.88.8, ಜಿ.ಶ್ರೀನಿಧಿ ಶೇ.88.64, ಆರ್​.ಗುಣಶ್ರೀ ಶೇ.87.84, ವಿ.ಜಿ.ಹರ್ಷಿತಾ ಶೇ.87.72, ಸಿ.ಶಾಲಿನಿ ಶೇ.85.6 ಸೇರಿ ಕೆ.ಸಿ.ಕಾರ್ತಿಕ್​ ಶೇ.85 ಪಡೆದು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net