ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ಕೃಷಿಕ ಕುಟುಂಬದಲ್ಲಿ ಬೆಳೆದು ಶಿಕ್ಷಕರಾಗಿ ಗ್ರಾಮೀಣ ಶಾಲೆಯಲ್ಲಿ ಮಕ್ಕಳನ್ನು ಸಂಟಿಸಿ ಸತತ ಶೇ.100 ಫಲಿತಾಂಶ ಪಡೆದ ಧೀಮಂತ ಶಿಕ್ಷಕ, ಸಂಟಕ, ರಾಜಕೀಯ ಧುರೀಣರಾದ ಸೋಮಪ್ಪ ಸುವರ್ಣರ ಜೀವನಾದರ್ಶ ಯುವ ಜನತೆಗೆ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಹಳೆಯಂಗಡಿಯಲ್ಲಿ ಮಂಗಳವಾರ ಕೆ.ಸೋಮಪ್ಪ ಸುವರ್ಣ ನೆರಳು ನೆಂಪು ಸಮಿತಿ ವತಿಯಿಂದ ಪ್ರಗತಿಪರ ಕೃಷಿಕ ಶಿಕ್ಷಣತಜ್ಞ ಸಾಮಾಜಿಕ ನೇತಾರ ಕೆ.ಸೋಮಪ್ಪ ಸುವರ್ಣರ 13ನೇ ವರ್ಷದ ಸಂಸ್ಮರಣೆ ಹಾಗೂ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ನುಡಿನಮನ ಸಲ್ಲಿಸಿದರು. ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತ ಹಾಗೂ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿದರು.
ಕೆ.ಸೋಮಪ್ಪ ಸುವರ್ಣ 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿ ಆಂಡ್ರೂೃ ಡಿಸೋಜ(ಶಿಕ್ಷಣ ಕ್ಷೇತ್ರ), ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಸದಸ್ಯರು(ಸಮಾಜ ಸೇವೆ), ಸುಧಾಕರ ಸಾಲ್ಯಾನ್(ಕೃಷಿ ಕ್ಷೇತ್ರ) ಅವರನ್ನು ಸಾಧಕರ ನೆಲೆಯಲ್ಲಿ ಪ್ರಶಸ್ತಿ ನೀಡಲಾಯಿತು.
ಸಮಿತಿ ಸದಸ್ಯರಾದ ಕೆ.ಮುರಳಿಧರ ಭಂಡಾರಿ ಕುಬೆವೂರು, ಡಾ.ಗಣೇಶ್ ಅಮೀನ್ ಸಂಕಮಾರ್, ಜೊಸ್ಸಿ ಪಿಂಟೋ, ಪ್ರಮೋದ್ ಕುಮಾರ್ ಕಿನ್ನಿಗೋಳಿ, ವಾಮನ್ ಕೋಟ್ಯಾನ್, ಶಶೀಂದ್ರ ಸಾಲ್ಯಾನ್ ಮತ್ತಿತರರಿದ್ದರು. ಪ್ರಮೋದ್ ಕುಮಾರ್ ಸ್ವಾಗತಿಸಿದರು. ನಿರಂಜಲ ಪ್ರಾರ್ಥಿಸಿದರು. ಜೊಸ್ಸಿ ಪಿಂಟೊ ಸನ್ಮಾನ ಪತ್ರ ವಾಚಿಸಿದರು. ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು. ಚಂದ್ರಶೇಖರ ಸುವರ್ಣ ವಂದಿಸಿದರು.